ಶುಕ್ರವಾರ, ಏಪ್ರಿಲ್ 16, 2021
31 °C

ಮಹದೇವಪುರ ವಲಯ: 33 ಕಿ.ಮೀ ಉದ್ದದಷ್ಟು ಒಎಫ್‌ಸಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹದೇವಪುರ ವಲಯದ ವಿವಿಧ ವಾರ್ಡ್‌ಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಒಟ್ಟು 32.9 ಕಿ.ಮೀ ಉದ್ದದ ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ಬಿಬಿಎಂಪಿ ಶನಿವಾರ ತೆರವುಗೊಳಿಸಿತು.

‘ಕೆ.ಆರ್.ಪುರ ಉಪ ವಿಭಾಗದಲ್ಲಿ 3 ಕಿ.ಮೀ, ಹೊರಮಾವು ಉಪ ವಿಭಾಗದಲ್ಲಿ 5 ಕಿ.ಮೀ, ಹೂಡಿ ಉಪ ವಿಭಾಗದಲ್ಲಿ 13.4 ಕಿ.ಮೀ, ವೈಟ್ ಫೀಲ್ಡ್ ಉಪ ವಿಭಾಗದಲ್ಲಿ 6 ಕಿ.ಮೀ ಮತ್ತು ಮಾರತ್ತಹಳ್ಳಿ ಉಪ ವಿಭಾಗದಲ್ಲಿ 5.5 ಕಿ.ಮೀ ಉದ್ದದ ಒಎಫ್‌ಸಿ ತೆರವುಗೊಳಿಸಲಾಗಿದೆ. ವಿದ್ಯುತ್ ಕಂಬಗಳು ಹಾಗೂ ಮರಗಳ  ಮೇಲೆ ಜೋತಾಡುತ್ತಿದ್ದ ಈ ಕೇಬಲ್‌ಗಳು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಿರಕಿರಿ ಉಂಟು ಮಾಡುತ್ತಿದ್ದವು’ ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದರು. 

‘ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳ್ನು ಇನ್ನು ಮುಂದೆಯೂ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕುತ್ತೇವೆ. ಇವುಗಳನ್ನು ಅಳವಡಿಸಿದ ಸಂಸ್ಥೆಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸುವುದಲ್ಲದೇ ದಂಡವನ್ನೂ ವಿಧಿಸುತ್ತೇವೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು