ಕೆಂಗೇರಿ: ನಗರದಲ್ಲಿ ಮಾಲ್ಟಾ ದೇಶದ ಕಾನ್ಸುಲೇಟ್ ಕಚೇರಿ ಶೀಘ್ರ ಆರಂಭಿಸಲಾಗುವುದು ಎಂದು ಮಾಲ್ಟಾ ದೇಶದ ಹೈ ಕಮಿಷನರ್ ರೂಬೆನ್ ಗೌಸಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು, ಕಾನೂನು ಅಧ್ಯಯನ ವಿಭಾಗ ಮತ್ತು ರಾಜ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಭಾರತ - ಮಾಲ್ಟಾ ಸಂಬಂಧಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತ ಮತ್ತು ಮಾಲ್ಟಾ ದೇಶಗಳು ಆರು ದಶಕಗಳ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಕೇವಲ ರಾಜತಾಂತ್ರಿಕ ಪ್ರಯತ್ನಗಳಿಂದ ಎರಡು ದೇಶಗಳ ಸಂಬಂಧ ವೃದ್ದಿಸುವುದಿಲ್ಲ. ದೇಶಗಳ ನಡುವಿನ ವ್ಯಾಪಾರ, ವಹಿವಾಟು, ತಂತ್ರಜ್ಞಾನ ಸಹಕಾರ ಹಾಗೂ ಸಾಂಸ್ಕೃತಿಕ ವಿನಿಮಯಗಳು ಸ್ನೇಹವನ್ನು ಗಾಢಗೊಳಿಸುತ್ತವೆ. ಆ ನಿಟ್ಟಿನಲ್ಲಿ ಉಭಯ ದೇಶಗಳ ವ್ಯಾಪಾರ –ವಹಿವಾಟುಗಳು ಪರಸ್ಪರ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದೆ’ ಎಂದರು.

‘ಯುರೋಪ್ನ ಅತಿ ಹೆಚ್ಚು ಜಿಡಿಪಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಔಷಧ ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಮೈಕ್ರೋಚಿಪ್ ತಯಾರಿಕಾ ಕ್ಷೇತ್ರಗಳಲ್ಲಿ ಯುರೋಪಿಯನ್ ಮಾರುಕಟ್ಟೆ ಪ್ರವೇಶಿಸಲು ಬಯಸುವ ಭಾರತೀಯ ಉದ್ಯಮಗಳಿಗೆ ಮಾಲ್ಟಾ ಪ್ರಮುಖ ಕೇಂದ್ರವಾಗಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ ಮಾತನಾಡಿ ‘ಬೆಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿನಿಮಯ, ಸಂಶೋಧನಾ, ಅಧ್ಯಯನ ಕ್ಷೇತ್ರದಲ್ಲಿ ಮಾಲ್ಟಾ ದೇಶದ ವಿಶ್ವವಿದ್ಯಾಲಯಗಳ ಜೊತೆ ಕೈ ಜೋಡಿಸಲಿದ್ದು, ಎರಡೂ ದೇಶಗಳ ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಎನ್.ದಶರಥ್, ಕಾನೂನು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ವಿಶ್ವನಾಥ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಡಾ.ವೀಣಾ ದೇವಿ, ಪ್ರಾಧ್ಯಾಪಕರಾದ ಡಾ.ಎಸ್.ವೈ. ಸುರೇಂದ್ರ, ಡಾ. ಚಂದ್ರಕಾಂತಿ ಎಲ್, ನಿಮಿದ ಗ್ರೂಪ್ ಸಂಸ್ಥಾಪಕ ನಿರ್ದೇಶಕ ಗೌರವ್ ಮಂಚಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.