ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್‌ಗೆ ಇಳಿದಿದ್ದ ಕಾರ್ಮಿಕ: ಎಫ್‌ಐಆರ್ ದಾಖಲು

Last Updated 21 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ 9ನೇ ಹಂತದ ಕಲ್ಪವೃಕ್ಷ ಹೋಟೆಲ್ ಬಳಿ ಮ್ಯಾನ್‌ಹೋಲ್‌ಗೆ ಕಾರ್ಮಿಕ ರೊಬ್ಬರನ್ನು ಇಳಿಸಿ ಸ್ವಚ್ಛಗೊಳಿಸ
ಲಾಗಿದ್ದು, ಈ ಸಂಬಂಧ ತಿಲಕ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸುವುದು ನಿಯಮಬಾಹಿರ. ಈ ಕೃತ್ಯದ ಬಗ್ಗೆ ಜಲಮಂಡಳಿ ಕಿರಿಯ ಎಂಜಿನಿಯರ್ ಜಿ. ಲಕ್ಷ್ಮಿ ಅವರು ಫೋಟೊ ಸಮೇತ ದೂರು ನೀಡಿದ್ದಾರೆ. ಕಾರ್ಮಿಕರಿಂದ ಮ್ಯಾನ್‌ಹೋಲ್ ಸ್ವಚ್ಛತೆ ನಿಷೇಧ ಹಾಗೂ ಪುನರ್ವಸತಿ ಕಾಯ್ದೆಯಡಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಕಾರ್ಮಿಕರೊಬ್ಬ ರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದ ಅಪರಿಚಿತರು, ಸ್ವಚ್ಛತೆ ಮಾಡಿಸಿದ್ದರು. ಇದರ ಫೋಟೊ ತೆಗೆದಿದ್ದ ವ್ಯಕ್ತಿಯೊಬ್ಬರು, ಜಲಮಂಡಳಿ ಅಧಿಕಾರಿಗಳಿಗೆ ಕಳುಹಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾಗ ಮ್ಯಾನ್‌ಹೋಲ್ ಮುಚ್ಚಳ ಮುಚ್ಚಲಾಗಿತ್ತು.’

‘ಅಧಿಕಾರಿಗಳ ಭೇಟಿಗೂ ಮುನ್ನವೇ ಅಪರಿಚಿತರು, ಕಾರ್ಮಿಕನನ್ನು ಮೇಲಕ್ಕೆ ಕರೆಸಿ ಮ್ಯಾನ್‌ಹೋಲ್‌ ಮುಚ್ಚಳ ಮುಚ್ಚಿಸಿರುವುದಾಗಿ ಗೊತ್ತಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕವೇ ಲಕ್ಷ್ಮಿ ಅವರು ದೂರು ನೀಡಿದ್ದಾರೆ. ಮ್ಯಾನ್‌ಹೋಲ್‌ಗೆ ಇಳಿದಿದ್ದ ಕಾರ್ಮಿಕ ಯಾರು? ಅವರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಜೀವಕ್ಕೆ ಕುತ್ತು ತರಲು ಯತ್ನಿಸಿದವರು ಯಾರು? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT