ಮಾವು ಹಲಸಿನ ಮೇಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿ ಮಲ್ಲಿಕಾ ಮಾವಿನಹಣ್ಣನ್ನು ಸವಿದರು.
ಪ್ರಜಾವಾಣಿ ಚಿತ್ರ
ಮೇಳದಲ್ಲಿ ಜನರು ಮಾವಿನ ಹಣ್ಣು ಖರೀದಿಸಿದರು
ಪ್ರಜಾವಾಣಿ ಚಿತ್ರ
ಮೇಳದಲ್ಲಿ ಅಪ್ಪೆಮಿಡಿ
‘ಈ ಬಾರಿ ಅಪ್ಪೆಮಿಡಿಯ ವಿವಿಧ ತಳಿಗಳು ಪ್ರದರ್ಶನದಲ್ಲಿವೆ. ಎರಡು ಮಳಿಗೆಗಳನ್ನು ಹುಣಸೆ ಹಣ್ಣು ಮಾರಾಟಕ್ಕೆ ನೀಡಲಾಗಿದೆ. ವಿದೇಶಿ ಮಾವಿನ ತಳಿಗಳಾದ ಜಪಾನ್‌ನ ಮಿಯಾಜಾಕಿ, ಫಿಲಿಪ್ಪೀನ್ಸ್‌ನ ಬ್ರೂನಿ ಕಿಂಗ್, ಥಾಯ್ಲೆಂಡ್‌ನ ರೆಡ್ ಐವರಿ, ಕ್ಸೇವಿಯರ್, ಮಾಯಾ ಟಾಮಿಅಟೈನ್ಸ್, ಕೆಂಟ್, ಕೆನ್ಸಿಂಗ್ಟನ್ ತಳಿಗಳನ್ನು ಪ್ರದರ್ಶನಕ್ಕಿಡ
ಲಾಗಿದೆ. ಮಾವು ಮತ್ತು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಾವು ಬೆಳೆಗಾರರ ಸಮಿತಿಯವರು ನಿಗದಿಪಡಿಸಿದ ದರದಂತೆ ಮಾರಾಟ ಮಾಡಲಾಗುತ್ತದೆ’ ಎಂದು ನಾಗರಾಜ್ ತಿಳಿಸಿದರು.
ಸೇಂದೂರ ಬಾದಾಮಿ ರಸಪುರಿ ರುಮಾನಿ ಮಲಗೋವಾ ಕೇಸರ್ ತಳಿಗಳಿವೆ. ಒಟ್ಟು 800 ಕೆ.ಜಿ ಹಣ್ಣನ್ನು ತಂದಿದ್ದೇನೆ. ಈ ಬಾರಿ ಫಸಲು ಕಡಿಮೆ ಇದೆ. ಮೇಳದಲ್ಲಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣು ಸಿಗುತ್ತದೆ. ನೇರವಾಗಿ ರೈತರಿಂದಲೇ ಖರೀದಿ ಮಾಡಬಹುದು.