ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ಮುನಿರಾಜು ಚಾಲನೆ

Published 18 ಡಿಸೆಂಬರ್ 2023, 16:28 IST
Last Updated 18 ಡಿಸೆಂಬರ್ 2023, 16:28 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತೀರಾ ಹದಗೆಟ್ಟ ರಾಜಕಾಲುವೆಗಳ ಸ್ವಚ್ಛತೆ, ತಡೆಗೋಡೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳೊಂದಿಗೆ ಎಲ್ಲಾ ಕಡೆ ಹೋಗಿ ಎಲ್ಲೆಲ್ಲಿ ಜರೂರಾಗಿ ಕೆಲಸ ಆಗಬೇಕು. ಎಲ್ಲೆಲ್ಲಿ ಬಾಕಿ ಇದೆ ಎಂದು ಪರಿಶೀಲಿಸುತ್ತಿದ್ದೇವೆ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಶೆಟ್ಟಿಹಳ್ಳಿ ವ್ಯಾಪ್ತಿಯ ಎನ್.ಆರ್.ಆರ್ ಕಾಲೇಜು ಹತ್ತಿರ, ಕಮ್ಮಗೊಂಡನಹಳ್ಳಿಯಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಹಲವು ಭಾಗಗಳಲ್ಲಿ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ದುರ್ನಾತ ಬೀರುತ್ತಿತ್ತು. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಅನೇಕ ಮಾರಣಾಂತಿಕ ಮತ್ತು ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಆದ್ದರಿಂದ ಅಂತಹ ಚರಂಡಿ ಮತ್ತು ರಾಜಕಾಲುವೆ ದುರಸ್ತಿ ಕಾರ್ಯ ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದರು.

‘ಮಳೆಗಾಲದಲ್ಲಿ ರಾಜ ಕಾಲುವೆಗಳಲ್ಲಿ ನೀರು ಹರಿಯದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜಲಾವೃತ ಆಗುವ ಸಂಭವವಿತ್ತು. ಅಂತಹ ರಾಜಕಾಲುವೆಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ' ಎಂದು ತಿಳಿಸಿದರು.

ಶೆಟ್ಟಿಹಳ್ಳಿ ವ್ಯಾಪ್ತಿಯ ಎನ್.ಆರ್.ಆರ್ ಕಾಲೇಜ್ ಹತ್ತಿರಕಮ್ಮಗೊಂಡನಹಳ್ಳಿಯಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್ ಹನಶ್ರೀ ಮಂಜುನಾಥ್ ರಮೇಶ್ ಯಾದವ್ ಜಬ್ಬಾರ್ ಗುತ್ತಿಗೆದಾರರು ಸ್ಥಳೀಯರು ಮುಂತಾದವರಿದ್ದರು.
ಶೆಟ್ಟಿಹಳ್ಳಿ ವ್ಯಾಪ್ತಿಯ ಎನ್.ಆರ್.ಆರ್ ಕಾಲೇಜ್ ಹತ್ತಿರಕಮ್ಮಗೊಂಡನಹಳ್ಳಿಯಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್ ಹನಶ್ರೀ ಮಂಜುನಾಥ್ ರಮೇಶ್ ಯಾದವ್ ಜಬ್ಬಾರ್ ಗುತ್ತಿಗೆದಾರರು ಸ್ಥಳೀಯರು ಮುಂತಾದವರಿದ್ದರು.

ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಹನಶ್ರೀ ಮಂಜುನಾಥ್, ರಮೇಶ್ ಯಾದವ್, ಜಬ್ಬಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT