ಸೋಮವಾರ, ಜನವರಿ 24, 2022
21 °C

ವಿಶ್ವನಾಥ್ ಹತ್ಯೆ ಸಂಚು: ‘ಎಂಎಲ್‌ಎ ಫಿನಿಷ್‌ ಆಗ್ಬೇಕು, ಕೋಟಿ ಖರ್ಚಾದ್ರೂ ಸರಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ಮಧ್ಯೆ ನಡೆ ಸಂಭಾಷಣೆಯ ಸಾರಾಂಶ ಇಲ್ಲಿದೆ.

ಗೋಪಾಲಕೃಷ್ಣ ಅವರು ಮಾತಿನ ಮಧ್ಯೆ, ಡಿಸಿಪಿ ನಾರಾಯಣಗೆ ಕರೆ ಮಾಡಿ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿರುವುದೂ ವಿಡಿಯೊದಲ್ಲಿದೆ. 

ಗೋಪಾಲಕೃಷ್ಣ: ಎಂಎಲ್‌ಎ ಫಿನಿಷ್‌ ಆಗಬೇಕು. ಎರಡರಲ್ಲಿ ಯಾವುದನ್ನು ಮಾಡ್ತೀಯ ಹೇಳು;

ದೇವರಾಜ್‌: ಅವ್ನನ್ನ ಫಿನಿಷ್‌ ಮಾಡೋಕೆ ಹೆಂಡ್ತಿ ಮಕ್ಕಳನ್ನ ಕಂಟ್ಕೊಂಡಿದಿವಲ್ಲ. ದುಡ್ಡಲ್ಲಿ ಫಿನಿಷ್‌ ಮಾಡಣ್ಣೊ. ಇದೆಲ್ಲ ಬಿಡಣ್ಣಾ ನೀನು.

ಗೋಪಾಲಕೃಷ್ಣ: ಫಿನಿಷ್‌ ಮಾಡು ಇಲ್ಲ ಕೋಟಿ ರೂಪಾಯಿ ಕೊಡು. ಏನಾದ್ರೂ ಸರಿ. ನಾನು–ನೀನು ಇಬ್ಬರೇ ಕೆಲಸ ಮಾಡೋಣ. ಅಷ್ಟೂ ಸೀಕ್ರೇಟ್‌ ಆಗಿ ಮಾಡಬೇಕು. ಒಬ್ಬರಿಗೂ ಗೊತ್ತಾಗಬಾರದು.

ದೇವರಾಜ್‌: ಮಾಡ್ಬಹುದು. ಆದರೆ ರಿಯಲ್‌ ಎಸ್ಟೇಟ್‌ ಮಾಡಬೇಕು ಕಣಣ್ಣ.

ಗೋಪಾಲಕೃಷ್ಣ: ರಿಯಲ್‌ ಎಸ್ಟೇಟೊ, ಏನಾದ್ರೂ ಸರಿ. ಡಿಸಿಪಿ, ಎಸಿಪಿ, ಚೀಫ್‌ ಸೆಕ್ರೆಟರಿ ಏನ್‌ ಬೇಕಾದ್ರೂ ಅರೆಂಜ್‌ ಮಾಡ್ಕೊಡ್ತೀನಿ. ಯಾವದಾದ್ರೂ ಒಳ್ಳೆ ಸಾವಕಾರನ ಪರಿಚಯ ಮಾಡ್ಕೊಳ್ಳೊಣ. ಮುಗಿಸಿದ್ರೆ ಸರಿ. 50 ಲಕ್ಷ, 1 ಕೋಟಿ ಆದ್ರೂ ಸರಿ. ಮುಗಿಸಬೇಕು. ಇಲ್ಲಾ ಸೋಲಿಸಿ ಬಿಸಾಕಿ.

ಇದನ್ನೂ ಓದಿ: ರೌಡಿಗಳೆಲ್ಲ ವಿಶ್ವನಾಥ್‌ ಜತೆ: ಕೊಲೆ ಸಂಚು ಆರೋಪಕ್ಕೆ ಡಿಕೆಶಿ ...

‌ದೇವರಾಜ್‌: ಹತ್ತು ವರ್ಷ ಸರ್ಕಾರ ಇತ್ತು. ಯೂಸ್‌ ಮಾಡಿಕೊಳ್ಳೋದು ಬಿಟ್ಟು ತರ್ಲೆ ನನ್ಮಕ್ಳನ್ನ, ಆಂಟಿಗಳನ್ನ ಇಂಟ್ಕೊಂಡಿರೊವ್ರನ್ನ ಜೊತೆಗೆ ಇಟ್ಕೊಂಡು ನೀನು. 

ಗೋಪಾಲಕೃಷ್ಣ: ತೋಟದ ಮನೆಯಲ್ಲಿ 6ರಿಂದ 7 ಗಂಟೆ ತನಕ ಒಬ್ನೇ ಇರ್ತಾನೆ. ಆ ಟೈಮು ಬೆಸ್ಟು.

ದೇವರಾಜ್‌: ಪಾಂಡಿಚೇರಿಯಿಂದ ಹುಡುಗರು ಬಂದಾವ್ರೆ. ಇಲ್ಲೇ ಅಬ್ಸ್ಕಾಂಡ್‌ ಆಗಿದಾರೆ ಒಳ್ಳೆ ಟೈಮಿದು ನೋಡಣ್ಣ ಏನ್‌ ಮಾಡೋಣ. ಅವ್ರು ಪಾಂಡಿಚೇರಿಯಲ್ಲಿ ಒಂದ್‌ ವಿಕೆಟ್‌ ಹೊಡ್ದು ಬಂದಾವ್ರೆ. ನೀನ್‌ ಹೂಂ ಅಂದ್ರೆ ಸ್ವಲ್ಪ ಅಡ್ವಾನ್ಸ್‌ ಕೊಟ್ಟು ಮುಗ್ಸಿ ಎತ್‌ ಬಿಸಾಕೋಣ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು