ಶನಿವಾರ, ಆಗಸ್ಟ್ 13, 2022
26 °C

100 ಮೊಬೈಲ್ ವಶ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಮುಜಾಮಿಲ್ ಪಾಷಾ (19), ಮೊಹಮದ್ ಆಸೀಫ್ (22) ಹಾಗೂ ಮೊಹಮದ್ ಮುಬಾರಕ್ (20) ಬಂಧಿತರು.

ವಿಜಯನಗರದಲ್ಲಿ ವೈದ್ಯರೊಬ್ಬರ ಐಫೋನ್ ಕಸಿದು ಆರೋಪಿಗಳು ಮಂಗಳವಾರ ಪರಾರಿಯಾಗಿದ್ದರು. ಈ ಸಂಬಂಧ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಜ್ಞಾನಭಾರತಿ, ಕೆ.ಪಿ.ಅಗ್ರಹಾರ ಹಾಗೂ ನಗರದ ವಿವಿಧ ಭಾಗಗಳಲ್ಲಿ ಸುಲಿಗೆ, ಕಳವು ಮಾಡಿ, ₹8 ಲಕ್ಷ ಮೌಲ್ಯದ ವಸ್ತುಗಳನ್ನು ವಾಲ್ಮೀಕಿನಗರದ ಸಲ್ಮಾನ್‍ಗೆ ನೀಡಿದ್ದರು ಎನ್ನಲಾಗಿದೆ.

ಕಳವು ಮಾಡಿದ್ದ 4 ದ್ವಿಚಕ್ರ ವಾಹನಗಳು ಹಾಗೂ ಚಾಮರಾಜಪೇಟೆಯ ಇರ್ಫಾನ್‍ಗೆ ನೀಡಿದ್ದ 100 ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು