ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಹಕ್ಕು ಕಾಯ್ದೆ: 2,44,481 ಅರ್ಜಿಗಳು ತಿರಸ್ಕೃತ

ಅರಣ್ಯಹಕ್ಕು ಕಾಯ್ದೆ: 16,127 ಪ್ರಕರಣಗಳಲ್ಲಿ ಭೂಮಿ ಹಕ್ಕುಪತ್ರ ವಿತರಣೆ
Last Updated 3 ಜನವರಿ 2023, 21:33 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆ–2006 ರಡಿ 2022ರ ನವೆಂಬರ್‌ ಅಂತ್ಯದವರೆಗೆ ಒಟ್ಟು 2,94,292 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 2,44,481 ಅರ್ಜಿಗಳು ತಿರಸ್ಕೃತ
ಗೊಂಡಿವೆ.

16,127 ಪ್ರಕರಣಗಳಲ್ಲಿ ಭೂಮಿ ಹಕ್ಕುಪತ್ರ ವಿತರಿಸಿದ್ದು, ಫಲಾನುಭವಿಗಳಿಗೆ 56,406 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಇನ್ನೂ 33,684 ಅರ್ಜಿಗಳು ಬಾಕಿ ಉಳಿದಿವೆ.

ತಲೆತಲಾಂತರಗಳಿಂದ ಅರಣ್ಯಗಳಲ್ಲಿ ವಾಸಿಸುತ್ತಿದ್ದರೂ ಅರಣ್ಯವಾಸಿಗಳ ಹಕ್ಕುಗಳನ್ನು ದಾಖಲಿಸದೇ ಇರುವ, ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಹಾಗೂ ದಾಖಲಿಸುವ ಅವಕಾಶವನ್ನು ಈ ಕಾಯ್ದೆ ನೀಡಿದೆ.

ಇದರಡಿ ಪರಿಶಿಷ್ಟ ಪಂಗಡದವರಿಂದ 47,713 ಅರ್ಜಿಸಲ್ಲಿಕೆಯಾಗಿದೆ. 12,762 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಿಸಿದ್ದು, 17,653 ಎಕರೆ ಜಮೀನು ವಿತರಿಸಲಾಗಿದೆ. 32,960 ಅರ್ಜಿಗಳು ತಿರಸ್ಕೃತಗೊಂಡಿದ್ದು, 1,991 ಅರ್ಜಿಗಳು ಇತ್ಯರ್ಥವಾ
ಗಿಲ್ಲ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ಇತರೇ ಪಾರಂಪರಿಕ ಕ್ಲೇಮುದಾರರೇ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಭಾಗದಲ್ಲಿ 2,42,640 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 2,07,750 ಅರ್ಜಿಗಳು ತಿರಸ್ಕೃತವಾಗಿವೆ. 2,021 ಅರ್ಜಿಗಳು ಪುರಸ್ಕೃತಗೊಂಡಿದ್ದು, 2,415 ಎಕರೆ ಭೂಮಿ ಮಂಜೂರು ಮಾಡಲಾಗಿದೆ.20,869 ಅರ್ಜಿಗಳ ಇತ್ಯರ್ಥವಾಗಿಲ್ಲ.

ಅಲ್ಲದೇ, ಸಮುದಾಯ ಹಕ್ಕುಗಳ ವಿಭಾಗದಲ್ಲಿ 5,999 ಅರ್ಜಿಗಳು ಸಲ್ಲಿಕೆಯಾಗಿದ್ದು, 1,344 ಅರ್ಜಿಗಳು ಪುರಸ್ಕೃತಗೊಂಡಿದ್ದು, 36,340.55 ಎಕರೆ ಜಮೀನು ಮಂಜೂರು ಮಾಡಲಾಗಿದೆ. 3,771 ಅರ್ಜಿಗಳು ತಿರಸ್ಕೃತಗೊಂಡಿದ್ದು, 824 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.

ಕಾಯ್ದೆಯ ಪ್ರಕಾರ 2005ರ ಡಿಸೆಂಬರ್‌ 13 ಕ್ಕೂ ಮುಂಚೆ ಅನುಸೂಚಿತ ಬುಡಕಟ್ಟುಗಳು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರಬೇಕು. ಇಲ್ಲವೇ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿರಬೇಕು. ಇತರೆ ಪಾರಂಪರಿಕ ಅರಣ್ಯವಾಸಿ
ಯೆಂದರೆ 2005 ರ ಡಿಸೆಂಬರ್‌ 13 ಕ್ಕೂ ಮುಂಚೆ ಕೊನೆಯ ಪಕ್ಷ ಮೂರು ತಲೆಮಾರಿನವರೆಗೆ (ಒಂದು ತಲೆ ಮಾರು ಎಂದರೆ 25 ವರ್ಷಗಳ ಅವಧಿ) ಅರಣ್ಯದಲ್ಲಿ ವಾಸಿಸುತ್ತಿರುವ ಅಥವಾ ಜೀವನೋಪಾಯಕ್ಕಾಗಿ ಯಾವುದೇ ವ್ಯಕ್ತಿ ಅರಣ್ಯ ಜಮೀನಿನ ಮೇಲೆ ಅವಲಂಬಿತರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT