ಶನಿವಾರ, ಸೆಪ್ಟೆಂಬರ್ 19, 2020
22 °C

ಹಣಕ್ಕಾಗಿ ಸೊಸೆಗೆ ಅತ್ತೆ ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣ ತಂದರೆ ಮಾತ್ರ ಗಂಡನ ಜೊತೆ ಸಂಸಾರಕ್ಕೆ ಅವಕಾಶ ನೀಡುವುದಾಗಿ ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಅನ್ನಪೂರ್ಣೇಶ್ವರಿ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.

ಯುವತಿಗೆ ಕಳೆದ ವರ್ಷ ಮದುವೆಯಾಗಿದ್ದು, ಗಂಡನೊಂದಿಗೆ ನಾಗರಬಾವಿಯಲ್ಲಿ ನೆಲೆಸಿದ್ದರು. ಇದಾದ ಕೆಲ ದಿನಗಳ ನಂತರ ಕಿರುಕುಳ ನೀಡಲು ಆರಂಭಿಸಿದರು. 

’ಕೆಲಸಕ್ಕೆ ಹೋಗಿ ಹಣ ತರಬೇಕು. ಇಲ್ಲದಿದ್ದರೆ ಮಗನೊಂದಿಗೆ ಮಲಗಲು ಬಿಡುವುದಿಲ್ಲ. ಮಕ್ಕಳಾದರೆ ಅದನ್ನು ನಾವೇ ಪೋಷಿಸಬೇಕು‘ ಎಂದು ಹೇಳಿ ಹೀಯಾಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಪೊಲೀಸರು ರಾಜಿ ನಡೆಸಿದ್ದರು. ಆ ಬಳಿಕ ಕಿರುಕುಳ ನೀಡುವುದು ಜಾಸ್ತಿಯಾಯಿತು‘ ಎಂದು ಯುವತಿ ದೂರಿದ್ದಾರೆ. ಪತಿ, ಅತ್ತೆ ಸೇರಿ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು