ಬೆಂಗಳೂರು: ಐಪಿಎಲ್ ಗೆದ್ದಿರುವ ಆರ್ಸಿಬಿ ತಂಡದ ಅಭಿನಂದನೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧಕ್ಕೆ ಬರುವವರ ಸಂಖ್ಯೆ ವಿಪರೀತವಾಗಿದ್ದರಿಂದ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ಬಿಎಂಆರ್ಸಿಎಲ್ ಸ್ಥಗಿತಗೊಳಿಸಿದೆ.

ಸಂಜೆ 4.30ರಿಂದ ಈ ಎರಡು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.ಟೋಕನ್ ಮತ್ತು ಕ್ಯೂಆರ್ ಟಿಕೆಟ್ ವಿತರಣಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಬದಲಾವಣೆಯನ್ನು ಗಮನಿಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಮತ್ತು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಅಭಿಮಾನಿಗಳು ಇಳಿದು ಹೋಗುತ್ತಿದ್ದು, ಎರಡೂ ನಿಲ್ದಾಣಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಜನಸಂದಣಿ ಉಂಟಾಗಿದೆ. ಮೆಟ್ರೊ ರೈಲಿನಲ್ಲಿಯು ವಿಪರೀತ ಜನಸಂದಣಿ ಉಂಟಾಗಿದೆ.
.RCB ಸಂಭ್ರಮಾಚರಣೆಯಲ್ಲಿ ದುರಂತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ: ಆರ್ಸಿಬಿಯ 10 ಅಭಿಮಾನಿಗಳ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.