ಬೆಂಗಳೂರು: ‘ನಮ್ಮ ಮೆಟ್ರೊ’ದ ಹಳದಿ ಮಾರ್ಗ ಉದ್ಘಾಟನೆಯಾದ ಬಳಿಕ ನಗರದ ದಕ್ಷಿಣ ಭಾಗದಲ್ಲಿ ವಾಹನ ದಟ್ಟಣೆಯ ಸಮಸ್ಯೆ ಕೊಂಚ ತಗ್ಗಿದೆ.

ಕಳೆದ 15 ದಿನಗಳಲ್ಲಿ ವಿವಿಧ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಶೇ 10ರಿಂದ ಶೇ 25ರಷ್ಟು ದಟ್ಟಣೆ ಸಮಸ್ಯೆ ಇಳಿಕೆ ಕಂಡಿದೆ ಎಂದು ನಗರ ಸಂಚಾರ ನಿರ್ವಹಣಾ ಕೇಂದ್ರದ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಿತ್ಯ ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗುತ್ತಿದ್ದ ಸವಾರರಿಗೆ ತುಸು ನೆಮ್ಮದಿ ತಂದಿದೆ. ದಟ್ಟಣೆಯ ಅವಧಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದ ವಾಹನಗಳು ಇದೀಗ ಅದೇ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಸುಗಮವಾಗಿ ಚಲಿಸುತ್ತಿವೆ.

ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಉದ್ಘಾಟನೆ ವಿಳಂಬವಾದ ಕಾರಣ ಈ ಭಾಗದ ಹತ್ತಾರು ಜಂಕ್ಷನ್ಗಳಲ್ಲಿ ಸಮಸ್ಯೆ ದುಪ್ಪಟ್ಟಾಗಿತ್ತು. ಹಳದಿ ಮಾರ್ಗದಲ್ಲಿ ಆಗಸ್ಟ್ 11ರಿಂದ ವಾಣಿಜ್ಯ ಸಂಚಾರ ಆರಂಭವಾದ ಮೇಲೆ ವಾಹನ ಸವಾರರಲ್ಲಿ ತುಸು ನಿರಾಳ ತಂದಿದೆ.

ನಿತ್ಯ ಒಂದು ಲಕ್ಷ ಮಂದಿ ‘ನಮ್ಮ ಮೆಟ್ರೊ’ದ ಹಳದಿ ಮಾರ್ಗವನ್ನು ಅವಲಂಬಿಸಿದ್ದರಿಂದ ರಸ್ತೆಗೆ ಇಳಿಯುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ತಗ್ಗಿದೆ.

ರಾಗಿಗುಡ್ಡ, ಜಯದೇವ ಆಸ್ಪತ್ರೆ ಜಂಕ್ಷನ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಹೊಂಗಸಂದ್ರ, ಕೂಡ್ಲುಗೇಟ್, ಹೊಸರೋಡ್, ಹೆಬ್ಬಗೋಡಿ, ಬೊಮ್ಮಸಂದ್ರ ಭಾಗದಲ್ಲಿ ವಿಪರೀತ ದಟ್ಟಣೆ ಆಗುತ್ತಿತ್ತು. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾಫ್ಟ್ವೇರ್ ಕಂಪನಿಗಳಿದ್ದು, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ತೆರಳುವುದಕ್ಕೂ ಟೆಕಿಗಳಿಗೆ ಸಾಧ್ಯ ಆಗುತ್ತಿರಲಿಲ್ಲ. ಈಗ ಸಮಸ್ಯೆ ತುಸು ತಗ್ಗಿದೆ.

ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಉಂಟಾಗುತ್ತಿದ್ದ ದಟ್ಟಣೆಯಿಂದ ಪಾರಾಗಿ ಅರ್ಧ ತಾಸಿನನಲ್ಲಿ ಪ್ರಯಾಣಿಕರು ಹಳದಿ ಮಾರ್ಗದ ಒಂದು ತುದಿಯಿಂದ ಮತ್ತೊಂದು ಬದಿಗೆ ತಲುಪುತ್ತಿದ್ದಾರೆ.

ಹಳದಿ ಮಾರ್ಗದ ಆರಂಭದಿಂದ ಮೆಟ್ರೊ ಜಾಲವು 96 ಕಿ.ಮೀ.ಗೆ ವಿಸ್ತರಣೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐ.ಟಿ ಕಂಪನಿಗಳಿಗೆ ಸಂಪರ್ಕಿಸುವಲ್ಲಿ ಹಳದಿ ಮಾರ್ಗವು ನಿರ್ಣಾಯಕ ಪಾತ್ರ ವಹಿಸುತ್ತಿದೆ.

‘ದಟ್ಟಣೆ ಅವಧಿಯಾದ ಬೆಳಿಗ್ಗೆ 7ರಿಂದ 11 ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಹಳದಿ ಮಾರ್ಗ ಸಂಪರ್ಕಿಸುವ ಪ್ರಮುಖ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ವಾಹನ ದಟ್ಟಣೆ ಇಳಿಕೆ ಕಂಡಿದೆ. ಸೋಮವಾರ ಹಾಗೂ ಮಂಗಳವಾರದ ದಟ್ಟಣೆ ಅವಧಿಯಲ್ಲಿ ವಾಹನಗಳ ಸಂಚಾರವನ್ನ ಆಧರಿಸಿ ಅಸ್ತ್ರಂ ಆ್ಯಪ್ ಮೂಲಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ಅವಧಿಯಲ್ಲಿ ಸಾಕಷ್ಟು ಸುಧಾರಣೆ ಆಗಿರುವುದು ಕಂಡುಬಂದಿದೆ’ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಂದಾಜಿನ ಪ್ರಕಾರ ಹಳದಿ ಮಾರ್ಗದಲ್ಲಿ ಪ್ರತಿನಿತ್ಯ 90 ಸಾವಿರದಿಂದ 1 ಲಕ್ಷದವರೆಗೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮೆಟ್ರೊ ಕೋಚ್ಗಳ ಕೊರತೆಯ ಕಾರಣಕ್ಕೆ ಕೆಲವೇ ಮೆಟ್ರೊ ರೈಲುಗಳು ಸಂಚಾರ ನಡೆಸುತ್ತಿವೆ. ಕೋಚ್ಗಳ ಸಂಖ್ಯೆ ಹೆಚ್ಚಾದ ಮೇಲೆ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಆಗ ರಸ್ತೆಗೆ ಇಳಿಯುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಪೊಲೀಸರು ತಿಳಿಸಿದರು.

‘ಪರಿಹಾರ ಸಿಕ್ಕಿದೆ’

ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಪ್ರತಿನಿತ್ಯ ದಟ್ಟಣೆ ಸಮಸ್ಯೆ ಉಂಟಾಗುತ್ತಿತ್ತು. ಈ ಎರಡು ಜಂಕ್ಷನ್ಗಳನ್ನು ದಾಟುವುದಕ್ಕೆ ಹರಸಾಹಸ ಪಡಬೇಕಿತ್ತು. ಹಳದಿ ಮಾರ್ಗ ಆರಂಭವಾದ ಬಳಿಕ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರ ಸಿಕ್ಕಿದೆ. –ಸುಶಾಂತ್ ಸಾಫ್ಟ್ವೇರ್ ಎಂಜಿನಿಯರ್

ಸಾರ್ವಜನಿಕ ಸಾರಿಗೆ ಬಳಸಲು ಮನವಿ

ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಿಸಿದ ನಂತರ ಸಾಫ್ಟ್ವೇರ್ ಕಂಪನಿಗಳು ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ‘ನಮ್ಮ ಮೆಟ್ರೊ’ ಬಳಸುವಂತೆ ಕೋರಿವೆ. ‘ಹಳದಿ ಮಾರ್ಗದ ಮೆಟ್ರೊ ಸಂಚಾರ ದಟ್ಟಣೆ ಇಲ್ಲದ ಪ್ರಯಾಣಕ್ಕೆ ಉತ್ತಮ. ಅದರಲ್ಲೂ ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಇದು ತುಂಬಾ ಅನುಕೂಲಕರ’ ಎಂದು ಇ–ಮೇಲ್ ಮೂಲಕ ಇನ್ಫೊಸಿಸ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸಂದೇಶ ನೀಡಿದೆ. ಸಾರ್ವಜನಿಕ ಸಾರಿಗೆ ಬಳಸಿದರೆ ದಟ್ಟಣೆ ತಗ್ಗಿಸಬಹುದು. ಮೆಟ್ರೊ ನಿಲ್ದಾಣಗಳಿಂದ ಬಿಎಂಟಿಸಿಯ ಫೀಡರ್ ಬಸ್ ಸೇವೆಯಿದೆ. ಅದನ್ನೂ ಬಳಸಿಕೊಂಡು ಕೆಲಸದ ಸ್ಥಳವನ್ನು ತಲುಪಬಹುದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.