ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಐದನೇ ರೈಲಿನ ಮೂರು ಬೋಗಿಗಳು ಸೋಮವಾರ ಬೆಂಗಳೂರಿಗೆ ತಲುಪಿವೆ. ಇನ್ನು ಮೂರು ಬೋಗಿಗಳು ಎರಡು ದಿನಗಳಲ್ಲಿ ತಲುಪಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಿಂದ ಐದನೇ ರೈಲು ಕೋಚ್ಗಳ ರವಾನೆಯಾಗಿದ್ದವು. ತಲುಪಿರುವ ಮೂರು ಬೋಗಿಗಳನ್ನು ಹೆಬ್ಬಗೋಡಿಯಲ್ಲಿರುವ ನಮ್ಮ ಮೆಟ್ರೊ ಡಿಪೊದಲ್ಲಿ ಇರಿಸಲಾಗಿದೆ. ಇನ್ನು ಮೂರು ಬೋಗಿ ತಲುಪಿದ ಬಳಿಕ ಅವುಗಳನ್ನು ಜೋಡಿಸಲಾಗುವುದು. ಇನ್ಸ್ಪೆಕ್ಷನ್ ಬೇ ಲೈನ್ನಲ್ಲಿ ಆರಂಭಿಕ ಸ್ಥಿರ ಪರೀಕ್ಷೆಗಳು ನಡೆಯಲಿವೆ. ಬಳಿಕ ಎರಡು ವಾರ, ವಾಣಿಜ್ಯ ಮಾರ್ಗದಲ್ಲಿ ರಾತ್ರಿ ವೇಳೆ ಪರೀಕ್ಷೆಗಳು ನಡೆಯಲಿವೆ. ಆ ನಂತರ ನಾಗರಿಕರ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.