ಬೆಂಗಳೂರು: ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ನಾರಾಯಣ ಹೆಲ್ತ್ ತನ್ನ 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬುಧವಾರ ಒಂದೇ ದಿನ 11,175ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಇಸಿಜಿ ಪರೀಕ್ಷೆ ನಡೆಸಿ ದಾಖಲೆ ಬರೆದಿದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಒಂದರಲ್ಲೇ 5,500 ಮಹಿಳೆಯರಿಗೆ ಇಸಿಜಿ ಪರೀಕ್ಷೆ ಮಾಡಲಾಯಿತು. 2023ರಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಒಂದೇ ಸ್ಥಳದಲ್ಲಿ 24 ಗಂಟೆಗಳಲ್ಲಿ 3,797 ಇಸಿಜಿ ಪರೀಕ್ಷೆ ನಡೆಸಿ ಗಿನ್ನೆಸ್ ದಾಖಲೆ ಸ್ಥಾಪಿಸಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ ಎಂದು ನಾರಾಯಣ ಹೆಲ್ತ್ ಅಧ್ಯಕ್ಷ ಡಾ. ದೇವಿ ಶೆಟ್ಟಿ ತಿಳಿಸಿದ್ದಾರೆ.

ನಾರಾಯಣ ಹೆಲ್ತ್ನ ಆಸ್ಪತ್ರೆಗಳು, ಹಾರ್ಟ್ ಸೆಂಟರ್ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಇಸಿಜಿ ಪರೀಕ್ಷೆ ನಡೆಸಲಾಯಿತು. ಮಹಾನಗರಗಳಿಂದ ಹಿಡಿದು ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ನಾರಾಯಣ ಹೆಲ್ತ್ ಗ್ರೂಪ್ ಸಿಇಒ ಡಾ. ಇಮ್ಯಾನುಯೆಲ್ ರೂಪರ್ಟ್ ಮಾತನಾಡಿ, ‘ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಶೇ 25ರಷ್ಟು ಸಾವುಗಳು ಉಂಟಾಗುತ್ತಿವೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಹೀಗಾಗಿ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ನಾರಾಯಣ ಹಾಸ್ಪಿಟಲ್ ಮಹತ್ವದ ಕ್ರಮ ಕೈಗೊಂಡಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.