ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿಯಲ್ಲಿ ರಾಷ್ಟ್ರಧ್ವಜ ಅನಾವರಣ

Last Updated 14 ಆಗಸ್ಟ್ 2020, 23:08 IST
ಅಕ್ಷರ ಗಾತ್ರ

ಪೀಣ್ಯದಾಸರಹಳ್ಳಿ: 74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ 4 ಸಾವಿರ ಅಡಿ ವ್ಯಾಪ್ತಿಯಲ್ಲಿ ರಂಗೋಲಿಯಲ್ಲಿ ರಾಷ್ಟ್ರಧ್ವಜ ಬಿಡಿಸುವ ಮೂಲಕ ದೇಶಕ್ಕೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಜೊತೆ ಪ್ರಾಂಶುಪಾಲರು, ಉಪನ್ಯಾಸಕರು ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ. ಸುಮಾರು 4000 ಕೆ.ಜಿ. ಉಪ್ಪು, 250 ಕೆ.ಜಿ. ಬಣ್ಣ ಹಾಗೂ 400ಕೆ.ಜಿ ಹೂಗಳನ್ನು ಬಳಸಿ ರಾಷ್ಟ್ರಧ್ವಜ ರೂಪಿಸಿದ್ದಾರೆ.

ಪ್ರಾಚಾರ್ಯ ಡಾ. ಎಚ್. ರಾಮಕೃಷ್ಣ ‘ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸುವ ರಂಗೋಲಿ ಸ್ಪರ್ಧೆಯನ್ನು ಕೂಡಾ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 2,750ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನವನವೀನ ರೀತಿಯಲ್ಲಿ ತ್ರಿವರ್ಣ ಧ್ವಜ ಬಿಡಿ ಗಮನ ಸೆಳೆದರು. ಈ ವೇಳೆ ಕೊರೊನಾ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು’ ಎಂದರು.

ಸಂಸ್ಥೆಯ ಮುಖ್ಯಸ್ಥ ಜಿ.ದಯಾನಂದ, ಕಾರ್ಯಕಾರಿ ನಿರ್ದೇಶಕ ಜಿ.ಡಿ.ಮನೋಜ್, ಉಪಪ್ರಾಂಶುಪಾಲ ಡಾ.ಎಂ.ಎಚ್.ಅಣ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT