ಬುಧವಾರ, ಆಗಸ್ಟ್ 10, 2022
25 °C

ನೇಪಾಳದ ಯುವಕನ ಕೊಲೆ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೇಪಾಳದ ಯುವಕ ಸುಶೀಲ್‌ (25) ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧಾರೆ.

ನೇಪಾಳದ ಸಾಗರ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜೀವನ್‌ ಬಿಮಾ ನಗರದಲ್ಲಿ ಸುಶೀಲ್‌ ಅವರ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.

ಕೊಲೆಗೆ ಕಾರಣ?:

ಸಾಗರ್ ನೆಲೆಸಿದ್ದ ಸ್ಥಳದ ಸುತ್ತಮುತ್ತ ಸುಶೀಲ್‌ ಕಳವು ಮಾಡುತ್ತಿದ್ದ. ಅಲ್ಲಿನ ನಿವಾಸಿಗಳು ಸಾಗರ್‌ ಮೇಲೆಯೇ ಅಪಾದನೆ ಮಾಡಿದ್ದರು. ಇದರಿಂದ ಬೇಸರಗೊಂಡ ಸಾಗರ್‌ ಇತರೆ ಮೂವರೊಂದಿಗೆ ಸುಶೀಲ್‌ನನ್ನು ಹಗ್ಗದಲ್ಲಿ ಕಟ್ಟಿಹಾಕಿ, ಥಳಿಸಿದ್ದರು. ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಆರೋಪಿಗಳು ಪರಾರಿಯಾಗಿದ್ದರು ಎಂದು ಪೂರ್ವವಲಯದ ಡಿ.ಸಿ.ಪಿ ಭೀಮಾಶಂಕರ್‌ ಗುಳೇದ ತಿಳಿಸಿದ್ಧಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು