ಗುರುವಾರ , ಜನವರಿ 23, 2020
19 °C

ನೈಸ್ ರಸ್ತೆಯಲ್ಲಿ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋನಪ್ಪನ ಅಗ್ರಹಾರ ಸಮೀಪವಿರುವ ನೈಸ್‌ ರಸ್ತೆಯಲ್ಲಿ ದಿನೇಶ್ ಎಂಬುವರನ್ನು ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಘಟನೆ ಸಂಬಂಧ ಅತ್ತಿಬೆಲೆಯ ದಿನೇಶ್ ಅವರು ದೂರು ನೀಡಿದ್ದಾರೆ. ಡ್ರಾಪ್‌ ನೀಡುವ ನೆಪದಲ್ಲಿ ಸುಲಿಗೆ ಮಾಡಿರುವ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದಿನೇಶ್ ಅವರು ಇದೇ 7ರಂದು ಸಂಜೆ ನೈಸ್‌ ರಸ್ತೆಯಲ್ಲಿ ನಿಂತುಕೊಂಡಿದ್ದರು. ಡ್ರಾಪ್ ನೀಡುವ ನೆಪದಲ್ಲಿ ಆರೋಪಿಗಳು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದರು. 2 ಕಿ.ಮೀ ದೂರ ಹೋದ ನಂತರ ಚಾಕು ತೋರಿಸಿ ಚಿನ್ನದ ಉಂಗುರ, ಚಿನ್ನದ ಸರ ಸುಲಿಗೆ ಮಾಡಿದ್ದರು. ನಂತರ, ನಿರ್ಜನ ಪ್ರದೇಶದಲ್ಲೇ ದಿನೇಶ್‌ ಅವರನ್ನು ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು