ಶನಿವಾರ, ಮಾರ್ಚ್ 6, 2021
31 °C
ಬಸ್‌ ಸೌಲಭ್ಯವಿಲ್ಲದೆ ತೊಂದರೆ * ಶಾಲೆ ತೊರೆಯುತ್ತಿರುವ ವಿದ್ಯಾರ್ಥಿನಿಯರು

ಶಾಲೆಗೆ ಹೋಗಲು 4 ಕಿ.ಮೀ. ನಡಿಗೆ !

ಸಿ.ಎಸ್. ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಗ್ರಾಮದಿಂದ ವಿದ್ಯಾರ್ಥಿಗಳು  ಪ್ರೌಢಶಾಲೆಗೆ ಹೋಗಿ ಬರಬೇಕೆಂದರೆ ನಿತ್ಯ ನಾಲ್ಕು ಕಿ.ಮೀ. ನಡೆಯಬೇಕಿದೆ. ಸಕಾಲದಲ್ಲಿ ಬಸ್‌ ಸೌಲಭ್ಯವಿಲ್ಲದ ಕಾರಣ 2 ಕಿ.ಮೀ. ದೂರದ ಶಾಲೆಗೆ ಹೋಗಿ ಬರಬೇಕಾದ ಅನಿವಾರ್ಯತೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. 

‘ನಮ್ಮ ಊರಿನಲ್ಲಿ ಪ್ರೌಢಶಾಲೆ ಇಲ್ಲ. ಐವರಕಂಡಪುರದಲ್ಲಿರುವ ಪ್ರೌಢಶಾಲೆ ನಮ್ಮೂರಿಗೆ 5 ಕಿ.ಮೀ. ದೂರದಲ್ಲಿದೆ. ಶಾಲಾ ಸಮಯದಲ್ಲಿ ಬಸ್‌ ಸೌಲಭ್ಯವಿಲ್ಲ. ಹೆಸರಘಟ್ಟದಿಂದ ಟಿ.ಬಿ. ಕ್ರಾಸ್‌ವರೆಗೆ ಬಸ್‌ನಲ್ಲಿ ಹೋಗಿ, ಅಲ್ಲಿಂದ 2 ಕಿ.ಮೀ. ನಡೆದು ಹೋಗಬೇಕು. ಮತ್ತೆ 2 ಕಿ.ಮೀ. ನಡೆದು ಬರಬೇಕಾಗಿದೆ’ ಎಂದು ಗ್ರಾಮದ ನಿವಾಸಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಸುಮಾರು 6 ಕಿ.ಮೀ. ದೂರದಲ್ಲಿರುವ ತೋಟಗೆರೆ ಪ್ರೌಢಶಾಲೆಗೆ ಬಿ.ಎಂ.ಟಿ.ಸಿ. ಬಸ್ಸುಗಳು ವಿರಳವಾಗಿವೆ. ಗ್ರಾಮಾಂತರ ಸಾರಿಗೆ ಬಸ್ಸುಗಳಿದ್ದರೂ, ಅವುಗಳು ನಿಗದಿತ ಸಮಯಕ್ಕೆ ಬರುವುದಿಲ್ಲ. ಪರೀಕ್ಷೆ ಸಂದರ್ಭದಲ್ಲಿ ಸಮಯ ಎಲ್ಲಿ ಮೀರಿ ಹೋಗುತ್ತದೆಯೋ ಎನ್ನುವ ಭಯದಿಂದ ನಡೆದುಕೊಂಡೇ ಶಾಲೆಗೆ ಹೋಗುತ್ತೇವೆ’ ಎಂದು 9ನೇ ತರಗತಿ ವಿದ್ಯಾರ್ಥಿ ಸಂತೋಷ ಹೇಳಿದರು. 

‘ಹೆಸರಘಟ್ಟ ಗ್ರಾಮದಲ್ಲಿ ಹೆಚ್ಚಿನ ಜನ ಕೂಲಿ ಕಾರ್ಮಿಕರಿದ್ದಾರೆ. ಖಾಸಗಿ ಶಾಲಾ ವಾಹನಗಳ ವ್ಯವಸ್ಥೆ ಮಾಡಿಸಿ, ವಿದ್ಯಾಭ್ಯಾಸ ಕೊಡಿಸುವ ಶಕ್ತಿ ಅವರಿಗಿಲ್ಲ’ ಎಂದು ಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದರಾಜು ತಿಳಿಸಿದರು.

‘ಹೆಸರಘಟ್ಟದಲ್ಲಿಯೇ ಪ್ರೌಢಶಾಲೆ ಪ್ರಾರಂಭವಾದರೆ ಬಿಳಿಜಾಜಿ, ಗುಡ್ಡದಹಳ್ಳಿ, ದಾಸನೇಹಳ್ಳಿ, ಸೀರೆಸಂದ್ರ, ಬ್ಯಾತ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಎಲ್ಲ ಗ್ರಾಮಗಳಿಂದ ಹೆಸರಘಟ್ಟಕ್ಕೆ ಬಸ್ಸಿನ ಸೌಕರ್ಯವಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು