ಬುಧವಾರ, ಫೆಬ್ರವರಿ 19, 2020
21 °C
ರಾಜ್ಯದ ಸಾಧನೆಗೆ ರಾಷ್ಟ್ರೀಯ ಆಯೋಗ ಅತೃಪ್ತಿ

ರಾಜ್ಯದಲ್ಲಿ ಪರಿಶಿಷ್ಟರಿಗೆ ಇಲ್ಲ ಮುದ್ರಾ ಸಾಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯದಲ್ಲಿ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಸಿಗುತ್ತಿದ್ದು, ಮುದ್ರಾ ಸಾಲ ನೀಡಿಕೆಯಲ್ಲಿ ಮಾತ್ರ ಅಂತಹ ಪ್ರಗತಿ ಸಾಧಿಸಲಾಗಿಲ್ಲ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಪ್ರೊ.ರಾಮ್‌ ಶಂಕರ್‌ ಕಟಾರಿಯಾ ಹೇಳಿದ್ದಾರೆ.

ಇಲ್ಲಿ ಗುರುವಾರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 11 ಸಾವಿರ ಮುದ್ರಾ ಸಾಲ ವಿತರಣೆ ಆಗಿದ್ದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿದ ಸಾಲ ಕೇವಲ 88. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ’ ಎಂದರು.

ಪರಿಶಿಷ್ಟರ ಕುಂದುಕೊರತೆಗಳ ಕುರಿತ ಮೇಲ್ವಿಚಾರಣಾ ಸಮಿತಿ ಸಭೆ ನಡೆದಿಲ್ಲದಿರುವುದನ್ನು ಆಯೋಗ ಬೊಟ್ಟುಮಾಡಿ ತೋರಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಆಯೋಗದ ಉಪಾಧ್ಯಕ್ಷ ಎಲ್‌.ಮುರುಗನ್‌, ಕೆ.ರಾಮುಲು, ಡಾ.ಯೋಗೇಂದ್ರ ಪಾಸ್ವಾನ್‌, ಡಾ.ಸ್ವರಾಜ್‌ ವಿದ್ವಾನ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು