ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಬೊಟಿಕ್‌ ಸರ್ಜಿಕಲ್‌ ವ್ಯವಸ್ಥೆ ಆರಂಭ

Last Updated 26 ಏಪ್ರಿಲ್ 2022, 7:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎನ್‌ಯು ಆಸ್ಪತ್ರೆಯಲ್ಲಿ ‘ವರ್ಸಿಯಸ್ ರೊಬೊಟಿಕ್‌ ಸರ್ಜಿಕಲ್ ಸಿಸ್ಟಮ್’ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮತ್ತು ಉದ್ಯಮಿ ಟಿ.ವಿ. ಮೋಹನದಾಸ್ ಪೈ ಉದ್ಘಾಟಿಸಿದರು.

ಪ್ರೊ.ಗೋವಿಂದ ರಂಗರಾಜನ್ ಮಾತನಾಡಿ, ‘ರೊಬೊಟಿಕ್ಸ್ ಆಧಾರಿತ ಶಸ್ತ್ರಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ. ಇದು ನೆಫ್ರಾಲಜಿ ಮತ್ತು ಮೂತ್ರಶಾಸ್ತ್ರಕ್ಕೆ ಅಗತ್ಯವಿರುವ ತಂತ್ರಜ್ಞಾನ. ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಪ್ರತಿಬಿಂಬಿಸಲು ಇದು ಸೂಕ್ತ ಸಮಯ’ ಎಂದರು.

ಟಿ.ವಿ.ಮೋಹನದಾಸ ಪೈ ಮಾತನಾಡಿ, ‘ತಂತ್ರಜ್ಞಾನ ಭವಿಷ್ಯದ ಆರೋಗ್ಯ ರಕ್ಷಣೆಗೆ ಸಹಾಯ ನೀಡಲಿದೆ’ ಎಂದರು.

ಎನ್‌ಯು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಸನ್ನ ವೆಂಕಟೇಶ್‌ ಎಂ.ಕೆ., ‘ರೋಗಿಗಳಿಗೆ ರೊಬೊಟಿಕ್ ಶಸ್ತ್ರಚಿಕಿತ್ಸೆ ಎಂದರೆ ಕಡಿಮೆ ನೋವು ಮತ್ತು ಬೇಗ ಆರಂಭಿಕ ಚೇತರಿಕೆ ಎಂದರ್ಥ. ಇದರಿಂದ ನಾವು ಕನಿಷ್ಠ ಆಕ್ರಮಣಕಾರಿ ತಂತ್ರಗಳಲ್ಲಿ ಹೆಚ್ಚು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT