ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: 6ನೇ ಮಹಡಿಯಿಂದ ಜಿಗಿದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Published 5 ಆಗಸ್ಟ್ 2024, 13:47 IST
Last Updated 5 ಆಗಸ್ಟ್ 2024, 13:47 IST
ಅಕ್ಷರ ಗಾತ್ರ

ಬೆಂಗಳೂರು: ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಧನ್ವಂತರಿ ನರ್ಸಿಂಗ್ ಕಾಲೇಜಿನ ಬಿಎಸ್​ಸಿ ನರ್ಸಿಂಗ್ ವಿದ್ಯಾರ್ಥಿನಿ ಜಿ.ಅತುಲ್ಯ ಭಾನುವಾರ ಹಾಸ್ಟೆಲ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳದ ಯುವತಿ ಅತುಲ್ಯ ಒಂದೂವರೆ ತಿಂಗಳ ಹಿಂದೆ ಕಾಲೇಜು ಸೇರಿದ್ದರು. ಕಾಲೇಜು ವಾತಾವರಣ ಇಷ್ಟವಾಗುತ್ತಿಲ್ಲ, ವಾಪಸ್ ಊರಿಗೆ ಕರೆದುಕೊಂಡು ಹೋಗುವಂತೆ ತಾಯಿಗೆ ಆಗಾಗ್ಗೆ ಕರೆ ಮಾಡಿ ಹೇಳುತ್ತಿದ್ದರು. ಕಾಲೇಜು ಶುಲ್ಕ ಪಾವತಿಸಲಾಗಿದೆ. ಸ್ವಲ್ಪ ದಿನ ಕಳೆದರೆ ಸರಿ ಹೋಗುತ್ತದೆ ಎಂದು ತಾಯಿ ಹೇಳಿ ಸಮಾಧಾನ ಪಡಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಅತುಲ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT