ಮಂಗಳವಾರ, ಮಾರ್ಚ್ 31, 2020
19 °C
ಹೆಚ್ಚಿದ ರಫ್ತು ಪ್ರಮಾಣ l ದಾಸ್ತಾನು ಕೊರತೆ

ಶತಕ ದಾಟಿದ ಈರುಳ್ಳಿ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಒಂದು ವಾರದಿಂದ ಈರುಳ್ಳಿ ದರ ಗಣನೀಯ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ₹100ರಿಂದ ₹110ರಂತೆ ಮಾರಾಟವಾಗುತ್ತಿದೆ. ದರ ಇಳಿಕೆಯಿಂದ ನಿಟ್ಟುಸಿರುಬಿಟ್ಟಿದ್ದ ಗ್ರಾಹಕರಿಗೆ ಈರುಳ್ಳಿ ಮತ್ತೆ ಜೇಬಿಗೆ ಕತ್ತರಿ ಹಾಕಿದೆ. 

ದೇಶದೆಲ್ಲೆಡೆ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಈಗ ಬೆಳೆದಿರುವ ಈರುಳ್ಳಿ ಮಾರುಕಟ್ಟೆಗೆ ಬರಲು ಕನಿಷ್ಠ ಎರಡು ತಿಂಗಳಾಗಬಹುದು. ಅಲ್ಲಿಯವರೆಗೆ ಈರುಳ್ಳಿ ದರ ₹100ರ ಆಸುಪಾಸಿನಲ್ಲೇ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

‘ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾಗಿ, ಬೆಲೆ ಏರಿಕೆಯಾಗಿದೆ. ದೇಶದ ಈರುಳ್ಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ಹೀಗಾಗಿ ಈರುಳ್ಳಿ ಹೆಚ್ಚು ರಫ್ತಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ಅಗತ್ಯ ಪ್ರಮಾಣದ ಈರುಳ್ಳಿ ಪೂರೈಕೆಯಾಗುತ್ತಿಲ್ಲ’ ಎನ್ನುತ್ತಾರೆ ಕೆ.ಆರ್‌.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸತೀಶ್‌.

ನುಗ್ಗೇಕಾಯಿ ದರ ಹೆಚ್ಚಳ: ಕೆ.ಆರ್‌.ಮಾರುಕಟ್ಟೆಯಲ್ಲಿ ಪ್ರತಿ ನುಗ್ಗೇಕಾಯಿ ₹20ರಿಂದ ₹30ರಂತೆ ಮಾರಾಟ ಆಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ನುಗ್ಗೇಕಾಯಿ ದರ ಪ್ರತಿ ಕೆ.ಜಿ.ಗೆ ₹330ರಷ್ಟಿದೆ.

'ಅಗತ್ಯ ಪ್ರಮಾಣದ ಈರುಳ್ಳಿ ದಾಸ್ತಾನು ಇಲ್ಲದ ಕಾರಣ ಬೆಲೆ ಹೆಚ್ಚಿದೆ. ಜನವರಿ ವೇಳೆಗೆ ದರ ಕಡಿಮೆಯಾಗಲಿದೆ.
-ಪ್ರಸನ್ನ, ತರಕಾರಿ ಸಗಟು ಮಾರುಕಟ್ಟೆ ವರ್ತಕರ ಸಂಘದ ಸಹ ಕಾರ್ಯದರ್ಶಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು