ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮೊಬೈಲ್‌ ವ್ಯಾನ್‌ಗಳಲ್ಲಿ ಕೆ.ಜಿಗೆ ₹35ರಂತೆ ಈರುಳ್ಳಿ ಮಾರಾಟ

Published : 23 ಸೆಪ್ಟೆಂಬರ್ 2024, 22:34 IST
Last Updated : 23 ಸೆಪ್ಟೆಂಬರ್ 2024, 22:34 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಮೊಬೈಲ್‌ ವ್ಯಾನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಪ್ರತಿ ಕೆ.ಜಿ.ಗೆ ₹35ರಂತೆ ಈರುಳ್ಳಿ ಮಾರಾಟ ಆರಂಭವಾಗಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಡಿಯ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್)  ಬೆಂಗಳೂರು ಶಾಖೆ, ಕೇಂದ್ರ ಸರ್ಕಾರದ ಸರ್ಕಾರದ ನಿರ್ದೇಶನದಂತೆ ರಿಯಾಯಿತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಸೆಪ್ಟೆಂಬರ್‌ 23ರಿಂದ ಆರಂಭಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿರುವ ವರದಿಗಳ ಕಾರಣದಿಂದ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಈರುಳ್ಳಿ ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಖರೀದಿಸಿದ ಈರುಳ್ಳಿಯನ್ನು  ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ನಾಲ್ಕು ಮೊಬೈಲ್‌ ವ್ಯಾನ್‌ಗಳಲ್ಲಿ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಎನ್‌ಸಿಸಿಎಫ್‌ ಶಾಖಾ ವ್ಯವಸ್ಥಾಪಕ ರವಿಚಂದ್ರ ಮಾಹಿತಿ ನೀಡಿದ್ದಾರೆ.

‌ಈರುಳ್ಳಿಯನ್ನು ವಿತರಿಸಲು ಒಟ್ಟು 112 ಮೊಬೈಲ್ ವ್ಯಾನ್‌ಗಳನ್ನು ಬಳಸಲಾಗುವುದು. ಈರುಳ್ಳಿ ದರ ಸಹಜ ಸ್ಥಿತಿಗೆ ಬರುವವರೆಗೂ ಮಾರಾಟ ಮುಂದುವರಿಯಲಿದೆ. ನಂದಿನಿ ಬಡಾವಣೆಯ ಡಾಲರ್ಸ್‌ ಕಾಲೊನಿಯಲ್ಲಿ ಮೊಬೈಲ್‌ ವ್ಯಾನ್‌ ಮೂಲಕ ಈರುಳ್ಳಿ ಮಾರಾಟ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT