ಬೆಂಗಳೂರು: ‘ಕ್ಲಿಷ್ಟವಾದ ಸಂಗತಿಗಳನ್ನೂ ಸರಳವಾಗಿ ಹೇಳಿರುವ ಪಂಚತಂತ್ರದ ಕತೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಚೀನಾ, ಜರ್ಮನಿ ಸೇರಿ ವಿವಿಧ ದೇಶಗಳ ಕತೆಗಳಿಗೆ ಹೋಲಿಸಿದರೆ, ಎಲ್ಲ ಕಾಲಕ್ಕೂ ಒಪ್ಪುವಂತಹ ಕತೆಗಳು ಭಾರತದಲ್ಲಿ ಮಾತ್ರ ಇವೆ’ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅಭಿಪ್ರಾಯಪಟ್ಟರು.

ಸದಾತನ ಬೆಂಗಳೂರು ಸಂಸ್ಥೆ ನಗರದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಅನುವಾದಿಸಿರುವ ‘ಪಂಚತಂತ್ರ’ ಹಾಗೂ ‘ಹಿತೋಪದೇಶ’ ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ವಿವಿಧ ವಯೋಮಾನದವರಿಗೆ ಬೇರೆ ಬೇರೆ ರೀತಿಯಲ್ಲಿ ತಿಳಿಹೇಳುವ ಕತೆಗಳು ನಮ್ಮಲ್ಲಿವೆ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರವು ಸಾವಿರಾರು ಕತೆಗಳನ್ನು ಒಳಗೊಂಡಿವೆ. ಓದುವ ಬುದ್ಧಿ, ಹೇಳುವ ಭಾಷೆ, ತಿಳಿದುಕೊಳ್ಳುವ ಮನಸ್ಥಿತಿಗಳ ಅನುಸಂಧಾನ ಆದಲ್ಲಿ ಮಾತ್ರ ಅದರ ಲಾಭ ಪಡೆಯಬಹುದು. ಸರ್ವಕಾಲಕ್ಕೂ ಸಲ್ಲುವ ಕಥೆಗಳನ್ನು ಅನುವಾದಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಪಂಚತಂತ್ರ ಬರೆದ ಕಾಲಘಟ್ಟದಲ್ಲಿ ಕೆಲ ಸಂದರ್ಭ ಸ್ತ್ರೀಯರನ್ನು ಹೀನಾಯವಾಗಿ ಕಂಡಿರುವ ಬಗ್ಗೆ ವೈಯಕ್ತಿಕವಾಗಿ ಆಕ್ಷೇಪವಿದೆ. ಸ್ತ್ರೀಯರನ್ನು ನಂಬಬಾರದು, ಮೋಸ ಮಾಡುತ್ತಾರೆ ಎಂಬ ವಿಚಾರ ಒಪ್ಪಲು ಸಾಧ್ಯವಿಲ್ಲ. ಮಕ್ಕಳಿಗೆ ಪಂಚತಂತ್ರ ನೀಡುವಾಗ ಅದರಲ್ಲಿನ ಒಳ್ಳೆಯ ಅಂಶಗಳನ್ನು ಮಾತ್ರ ತಿಳಿಸಬೇಕು. ಮಕ್ಕಳಲ್ಲಿ ಮಹಿಳೆಯರ ಬಗ್ಗೆ ತಪ್ಪು ಭಾವನೆ ಬರದಂತೆ ಎಚ್ಚರವಹಿಸಬೇಕು’ ಎಂದರು.

ಲೇಖಕ ಜಗದೀಶ ಶರ್ಮ ಸಂಪ, ‘ಕಣ್ಣಿಗೆ ಕಾಣದ ಮನಸ್ಸಿನ ಬಾಧೆ ನಿವಾರಿಸಲು ಕತೆಗಳು ನೆರವಾಗಬಲ್ಲವು. ಇದನ್ನು ತುಂಬ ಹಿಂದೆಯೇ ಭಾರತೀಯರು ಕಂಡುಕೊಂಡಿದ್ದರು. ಪ್ರಾಚೀನ ಭಾರತದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಯಾವುದೇ ಪ್ರತ್ಯೇಕ ಪುಸ್ತಕಗಳಿರಲಿಲ್ಲ. ಆದರೆ, ಆ ಕಾಲದ ಎಲ್ಲ ಪುಸ್ತಕಗಳು ವ್ಯಕ್ತಿತ್ವ ವಿಕಸನದ ಅಂಶಗಳನ್ನೇ ಹೊಂದಿವೆ’ ಎಂದು ಹೇಳಿದರು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಭೀಮಶಾ ಆರ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.