ಬೆಂಗಳೂರು: ‘ಪ್ರೊ.ನರೇಂದ್ರ ಪಾಣಿ ಸಂಪಾದನೆ ಮಾಡಿರುವ ‘ಡೈನಾಮಿಕ್ಸ್ ಆಫ್ ಡಿಫರೆನ್ಸ್’ ಕೃತಿಯು ಅಸಮಾನತೆಯ ವಿವಿಧ ಆಯಾಮಗಳ ಕುರಿತು ಮಾತನಾಡುತ್ತದೆ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಎಸ್‌ಇಸಿ) ನಿರ್ದೇಶಕ ಡಿ.ರಾಜಶೇಖರ್ ಅಭಿಪ್ರಾಯಪಟ್ಟರು.

ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್‌ಐಎಎಸ್) ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕವು ಒಟ್ಟು ಐದು ಅಧ್ಯಾಯಗಳನ್ನು ಒಳಗೊಂಡಿದೆ. 5 ವರ್ಷದೊಳಗಿನ ಶೇ 36ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹಾಗೂ ಶೇ 32ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯಿಂದ ಬಳಲುತ್ತಿದ್ದು, 2019 ಮತ್ತು 2021ರಲ್ಲಿ ನಡೆಸಲಾಗಿದ್ದ ಒಟ್ಟು ಐದು ಸಮೀಕ್ಷೆಗಳಿಂದ ದೃಢಪಟ್ಟಿತ್ತು. ಇದು ಗ್ರಾಮೀಣ ಭಾರತದಲ್ಲಿನ ಅಸಮಾನತೆಯನ್ನು ಬಿಂಬಿಸುತ್ತದೆ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿನ ಅಸಮಾನತೆಯ ಮೇಲೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ. ಸಮೀಕ್ಷೆಯ ಆಧಾರದಲ್ಲಿ ಇದನ್ನು ಪ್ರತಿಪಾದಿಸಲಾಗಿದೆ. ಪುಸ್ತಕದ ಅಧ್ಯಾಯವೊಂದರಲ್ಲಿ ಶಿಕ್ಷಣ, ಆರೋಗ್ಯ, ಜಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿನ ಅಸಮಾನತೆ ಹಾಗೂ ಅದರ ಅಪಾಯದ ಕುರಿತು ಚರ್ಚಿಸಲಾಗಿದೆ. ಸಾಹಿತ್ಯ ಲೋಕಕ್ಕೆ ಇದೊಂದು ಅಮೂಲ್ಯ ಗ್ರಂಥ. ಇದು ಕಾಲೇಜುಗಳಲ್ಲಿ ಬೋಧಿಸಲು ಯೋಗ್ಯವಾದ ಕೃತಿಯಾಗಿದೆ’ ಎಂದು ಹೇಳಿದರು.

ಪುಸ್ತಕ ಸಂಪಾದನೆ ಮಾಡಿರುವ ಪ್ರೊ.ನರೇಂದ್ರ ಪಾಣಿ, ‘ಅಸಮಾನತೆ ಪ್ರಕ್ರಿಯೆ, ರೂಪಾಂತರ ಪ್ರಕ್ರಿಯೆ, ದುರ್ಬಲತೆ ಹಾಗೂ ವಿಮೋಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.