ಮಂಗಳವಾರ, ಸೆಪ್ಟೆಂಬರ್ 29, 2020
27 °C

ಉದ್ಯಾನಕ್ಕೆ ವಿಜಯಕುಮಾರ್ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಯನಗರದಲ್ಲಿ ನವೀಕೃತ ಬುಲೇವಾರ್ಡ್ ಉದ್ಯಾನಕ್ಕೆ ಮಾಜಿ ಶಾಸಕ ಬಿ.ಎನ್.ವಿಜಯ್ ಕುಮಾರ್ ಅವರ ಹೆಸರಿಡಲಾಗಿದೆ. ನವೀಕೃತ ಉದ್ಯಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಉದ್ಘಾಟಿಸಿದರು.

ಪಟ್ಟಾಭಿನಗರ ವಾರ್ಡ್‍ನಲ್ಲಿರುವ ಈ ಉದ್ಯಾನದಲ್ಲಿ ₹2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಉದ್ಯಾನದಲ್ಲಿ ಬಿ.ಎನ್.ವಿಜಯಕುಮಾರ್ ಪುತ್ಥಳಿ ನಿರ್ಮಿಸಲಾಗಿದೆ. ಉದ್ಯಾನವು ಒಟ್ಟು 3,456 ಚ.ಮೀ ಉದ್ದವಿದೆ. ವಾಯುವಿಹಾರಕ್ಕೆ ಅನುಕೂಲವಾಗುವಂತೆ 256 ಮೀಟರ್ ಉದ್ದದ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ.

ಹಿರಿಯ ನಾಗರಿಕರಿಗಾಗಿ ವಿಶ್ರಾಂತಿ ಸ್ಥಳ ಹಾಗೂ ತೆರೆದ ವ್ಯಾಯಾಮ ಉಪಕರಣ ಅಳವಡಿಸಲಾಗಿದೆ. ಉದ್ಯಾನದ ಹಲವೆಡೆ 'ಕ್ಯಾಸ್ಟ್ ಐರನ್' ಶೈಲಿಯ ಆಸನಗಳನ್ನು ಹಾಕಲಾಗಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.