‘ಕಳಪೆ ಕಾಮಗಾರಿಯಿಂದ ಗುಂಡಿ’

ಕೆಂಗೇರಿ ಮೆಟ್ರೊ ನಿಲ್ದಾಣದಿಂದ ದೊಡ್ಡಬೆಲೆಗೆ ಹೋಗುವ ಮುಖ್ಯರಸ್ತೆಗೆ ಇತ್ತೀಚೆಗೆ ಹೊಸದಾಗಿ ಡಾಂಬರ್ ಹಾಕಲಾಗಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಮಧ್ಯದಲ್ಲಿಯೇ ದೊಡ್ಡ ಗುಂಡಿ ಕಾಣಿಸಿಕೊಂಡಿದೆ. ಸಂಬಂಧಪಟ್ಟ ಜಿಬಿಎ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ರಸ್ತೆ ಮಧ್ಯದಲ್ಲಿ ಇರುವ ಗುಂಡಿಯನ್ನು ಮುಚ್ಚಿಲ್ಲ. ಕಿರಿದಾದ ಈ ರಸ್ತೆಯಲ್ಲಿ ಬಸ್ಗಳು, ಶಾಲಾ ವಾಹನಗಳು ಸಂಚರಿಸುತ್ತವೆ. ಇದೇ ರಸ್ತೆಗೆ ಹೊಂದಿಕೊಂಡು ಕಾರ್ಖಾನೆಗಳೂ ಇರುವುದರಿಂದ ಬೃಹತ್ ಗಾತ್ರದ ಲಾರಿಗಳು ಸಹ ಇಲ್ಲಿ ಸಾಗುತ್ತವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಜಿಬಿಎ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಗುಂಡಿ ಮುಚ್ಚಲು ಕ್ರಮವಹಿಸಬೇಕು.

– ಸದಾಶಿವ, ದೊಡ್ಡಬೆಲೆ ನಿವಾಸಿ

‘ಪಾದಚಾರಿ ಮಾರ್ಗದಲ್ಲಿ ಕಸ’

ಉತ್ತರಹಳ್ಳಿ ಮುಖ್ಯರಸ್ತೆಯ ನಿತ್ಯಶ್ರೀ ಸಂಕಲ್ಪ ಅಪಾರ್ಟ್ಮೆಂಟ್ ಮುಂದಿನ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಹಾಕಲಾಗಿದೆ. ದಿನದಿಂದ ದಿನಕ್ಕೆ ಇಲ್ಲಿ ಕಸ ಹೆಚ್ಚಾಗುತ್ತಿದೆ. ಇದರಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮತ್ತು ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಗಾಳಿ ಬೀಸಿದಾಗ, ಈ ಕಸ ರಸ್ತೆಗಳಿಗೂ ಹರಡಿಕೊಳ್ಳುತ್ತದೆ. ಆದ್ದರಿಂದ ಇಲ್ಲಿ ಕಸ ಹಾಕದಂತೆ ಹಾಗೂ ಈಗ ಇರುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.

– ಶಶಾಂಕ, ಗೌಡನಪಾಳ್ಯ

‘ಬಸ್ ಶೆಲ್ಟರ್ ನಿರ್ಮಿಸಿ’

ರಾಜರಾಜೇಶ್ವರಿ ನಗರದ ಲಗ್ಗೆರೆಯ ಎಸ್ಬಿಐ ಬ್ಯಾಂಕ್ ಬಳಿ ಬಿಎಂಟಿಸಿ ಬಸ್ ನಿಲ್ದಾಣವಿದ್ದು, ಪ್ರತಿದಿನ ಇಲ್ಲಿ ಐದಕ್ಕೂ ಹೆಚ್ಚು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಬಸ್ಗಳು ಸಂಚರಿಸಲಿವೆ. ಲಗ್ಗೆರೆಯ ಈ ನಿಲ್ದಾಣದಲ್ಲಿ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಗಾರ್ಮೆಂಟ್ಸ್ಗೆ ಹೋಗುವ ಮಹಿಳೆಯರು ಬಸ್ಗೆ ಇಲ್ಲಿ ನಿಂತೇ ಕಾಯಬೇಕಾಗಿದೆ. ಕುಳಿತುಕೊಳ್ಳಲು ಅಥವಾ ಮಳೆ–ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಸ್ ಶೆಲ್ಟರ್ ನಿರ್ಮಿಸಿಲ್ಲ. ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ, ಇಲ್ಲಿ ಬಸ್ ಶೆಲ್ಟರ್ ನಿರ್ಮಿಸಿಕೊಡಬೇಕು.

– ಸಿದ್ದಗನಾಗಯ್ಯ ಜಿ., ಚೌಡೇಶ್ವರಿ ನಗರ

‘11 ಗಂಟೆಗೆ ಮುಚ್ಚುವ ಉದ್ಯಾನ’

ಜೆ.ಪಿ.ನಗರ ಮೊದಲನೆ ಹಂತದಲ್ಲಿರುವ ಎಸ್.ಕೆ. ನಟರಾಜ್ ಉದ್ಯಾನ (ಆಕ್ಸ್ಫರ್ಡ್ ಶಾಲೆ ಸಮೀಪ) ಮತ್ತು ಸುತ್ತಲಿನ ಸಣ್ಣ ಉದ್ಯಾನಗಳನ್ನು ಬೆಳಿಗ್ಗೆ 11 ಗಂಟೆಗೆ ಮುಚ್ಚಲಾಗುತ್ತಿದೆ. ಸಾರ್ವಜನಿಕರನ್ನು ಬಲವಂತದಿಂದ ಹೊರಗೆ ಕಳುಹಿಸಲಾಗುತ್ತಿದೆ. ಸಂಜೆ 4 ಗಂಟೆಯವರೆಗೂ ಗೇಟ್ಗೆ ಬೀಗ ಹಾಕಿರುತ್ತಾರೆ. ನಗರದ ಬಹಳಷ್ಟು ಉದ್ಯಾನಗಳು ದಿನವಿಡೀ ತೆರೆದಿರುತ್ತವೆ. ಅದೇ ರೀತಿ, ಇಲ್ಲಿನ ಉದ್ಯಾನಗಳು ತೆರೆದಿರುವಂತೆ ಸಂಬಂಧಪಟ್ಟವರು ಕ್ರಮವಹಿಸಬೇಕು.

– ಎಸ್. ರಮೇಶ್, ಜೆ.ಪಿ.ನಗರ

‘ರಸ್ತೆಯಲ್ಲಿ ಹರಿಯುವ ತ್ಯಾಜ್ಯ ನೀರು’

ಕಾಡುಗೋಡಿಯ ಬೆಳತೂರು ಸರ್ಕಾರಿ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ಇದರಿಂದ ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಸ್ಥಳೀಯ ನಾಗರಿಕರಿಗೆ ಸಮಸ್ಯೆ ಆಗಿದೆ. ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯ ರಸ್ತೆಯಲ್ಲಿಯೇ ತ್ಯಾಜ್ಯ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗಿದ್ದು, ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ಸರಿಪಡಿಸುವಂತೆ ಬೆಂಗಳೂರು ಜಲಮಂಡಳಿ ಹಾಗೂ ಪಾಲಿಕೆಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ.

– ಮುನೀಂದ್ರ, ಬೆಳತೂರು

‘ಬಸ್ ತಂಗುದಾಣಗಳಲ್ಲಿ ನಾಮಫಲಕ ಬರೆಯಿಸಿ’

ಜಂಬೂಸವಾರಿ ದಿಣ್ಣೆ ಮುಖ್ಯರಸ್ತೆಯ ಬಸ್ ತಂಗುದಾಣದಲ್ಲಿ ಗೌರವ ನಗರ ಎಂಬ ನಾಮಫಲಕ ಬರೆದಿಲ್ಲ. ನಗರದಲ್ಲಿ ಇಂತಹ ಹಲವಾರು ಬಸ್ ತಂಗುದಾಣಗಳಿವೆ. ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಸುವವರು ಯಾವ ತಂಗುದಾಣದಲ್ಲಿ ಇಳಿಯಬೇಕು ಎಂಬ ಗೊಂದಲ ಉಂಟಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಸ್ ತಂಗುದಾಣಗಳಲ್ಲಿ ಆಯಾ ಪ್ರದೇಶದ ಹೆಸರನ್ನು ಬರೆಯಿಸಬೇಕು.

– ಎಚ್. ದೊಡ್ಡ ಮಾರಯ್ಯ, ಸಂತೃಪ್ತಿ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.