ಬೆಂಗಳೂರು: ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವನ್ನು ನೇಕಾರ ಸ್ನೇಹಿಗೊಳಿಸಲು ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮತಿ ಸಿಗುವ ವಿಶ್ವಾಸವಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಭಿವೃದ್ಧಿ ಆಯುಕ್ತೆ ಕೆ.ಜ್ಯೋತಿ ಹೇಳಿದರು.

ಚಿತ್ರಕಲಾ ಪರಿಷತ್ತಿನಲ್ಲಿ ಸಾಗರದ ಹೆಗ್ಗೋಡು-ಹೊನ್ನೇಸರದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಕರಕುಶಲ ಕಾರ್ಯಾಗಾರದಲ್ಲಿ ಕೈಮಗ್ಗ ಹಾಗೂ ನೈಸರ್ಗಿಕ ಬಣ್ಣ ಬಳಸಿದ ಹಾಸಿಗೆಯ ಮೇಲು ಹೊದಿಕೆ ಬಿಡುಗಡೆ ಮಾಡಿ ಮಾತನಾಡಿದರು.

‘ಕೈಯಿಂದ ನೇಯ್ದ ಮತ್ತು ಕೈಮಗ್ಗ ಬಟ್ಟೆಯ ಉತ್ಪಾದಕರ ನಡುವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮಾರುಕಟ್ಟೆ ಅಗತ್ಯವಿದೆ. ಈ ಕಾರ್ಯ ಗಾಂಧಿ ವಸ್ತ್ರೋದ್ಯಮ ಕೋಶದಿಂದ ಸಾಧ್ಯ. ಸರ್ಕಾರದ ಕನಿಷ್ಠಮಟ್ಟದ ಹಸ್ತಕ್ಷೇಪ ಇರುವಂತೆ ಕ್ರಮವಹಿಸಲಾಗುವುದು. ಕೈಮಗ್ಗ ನೇಕಾರರಿಗೆ ಜಾರಿಯಲ್ಲಿರುವ ಯೋಜನೆಗಳು ಅನುಕೂಲಕರವಾಗಿದ್ದರೆ ಮುಂದುವರಿಸಲಾಗುವುದು. ಇಲ್ಲವೇ, ಕೈಬಿಟ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಕೋಶಕ್ಕೆ ನೀಡಲು ಪ್ರಸ್ತಾಪ ಮಾಡಲಾಗಿದೆ’ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮೇಳ ಉದ್ಘಾಟಿಸಿದರು. ಚರಕ ಕುರಿತ ‘ದಿ ಚರಕ ಸ್ಟೋರಿ ಕಾಫಿ ಟೇಬಲ್’ ಪುಸ್ತಕವನ್ನು ಲೇಖಕಿ ಸಾಧನಾ ರಾವ್ ಬಿಡುಗಡೆ ಮಾಡಿದರು. ಚರಕದ ಸಂಸ್ಥಾಪಕ ಪ್ರಸನ್ನ, ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ಎನ್.ರಮೇಶ್, ಸಿಇಒ ಟೆರೆನ್ಸ್ ಪೀಟರ್, ಶಾರದಾ ರಿತೀಶ್, ವೀಣಾ ಹೆಗಡೆ, ರಾಮಚಂದ್ರಪ್ಪ ಉಪಸ್ಥಿತರಿದ್ದರು.

ಗಮನ ಸೆಳೆದ ನೈಸರ್ಗಿಕ ಬಟ್ಟೆಗಳು

ಚರಕದ ವಿನೂತನ ವಿನ್ಯಾಸದ ನೈಸರ್ಗಿಕ ಬಣ್ಣದ ಕೈಮಗ್ಗದ ಸಿದ್ಧ ಉಡುಪು-ಬಟ್ಟೆಗಳ ಜತೆಗೆ ಚೆನ್ನೈನ ತುಲಾ ಸಂಸ್ಥೆಯ ಕೈಮಗ್ಗ ವಸ್ತುಗಳು ಶಿರಸಿಯ ಚೇತನಾ ಫೌಂಡೇಷನ್ ಅವರ ಬಾಳೆನಾರಿನ ಉತ್ಪನ್ನಗಳು ಆಂಧ್ರಪ್ರದೇಶದ ಟಿಂಬಕ್ಟು ಕಲೆಕ್ಟಿವ್ನ ಸಹಜ ಬಣ್ಣದ ವಸ್ತುಗಳು ಗಮನ ಸೆಳೆದವು. ಮರಳಿ ಮಣ್ಣಿಗೆಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳು ಉತ್ತರ ಕರ್ನಾಟಕದ ದಖನಿ ಡೈರಿಯ ಉಣ್ಣೆಯ ವಸ್ತುಗಳು ಸಹನಾ ರೀಡ್ಸ್ನ ಹುಲ್ಲಿನ ಬ್ಯಾಗ್ಗಳು ಜಿಯೋಸ್ಮಿನ್ ಕರಕುಶಲ ವಸ್ತುಗಳು ನೇಚರ್ ಆಲಿಯ ಸಹಜ ಬಣ್ಣದ ಉಡುಪುಗಳು ಟೆರಾಬಾನ್ ಅವರ ಮಣ್ಣಿನ ಮಡಿಕೆ-ಕುಡಿಕೆಗಳು ಟೆರಾಕೋಟಾ ವಸ್ತುಗಳು ಮಾಯ ಅವರ ಕಸೂತಿಯ ಬಟ್ಟೆಗಳು ಹಾಗೂ ಉತ್ತರ ಕರ್ನಾಟಕದ ವಿವಿಧ ನೇಕಾರರು ಸಿದ್ಧಪಡಿಸಿದ ತರಹೇವಾರಿ ಉಡುಪುಗಳು ಜನರನ್ನು ಆಕರ್ಷಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.