ಬೆಂಗಳೂರು: ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ 10ರ ಬದಲು 16 ಅಂತಸ್ತು ನಿರ್ಮಿಸಿಕೊಳ್ಳುವ ಪ್ರೀಮಿಯಂ ಎಫ್ಎಎಆರ್ (ಫ್ಲೋರ್ ಏರಿಯಾ ರೇಷಿಯೊ) ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಜಾರಿಯಾಗಿದೆ.

ಭೂ ಮಾಲೀಕರು, ಅಭಿವೃದ್ಧಿದಾರರು ಮತ್ತು ನಿರ್ಮಾಣದಾರರು ಪಿಎಫ್ಎಆರ್ ಅನ್ನು ಬಳಸಿಕೊಳ್ಳಲು ನಿವೇಶನದ ಮಾರ್ಗಸೂಚಿಯ ಶೇ 28ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ –2015’ರ ಸೆಕ್ಷನ್ 13–ಇಗೆ ತಿದ್ದುಪಡಿ ತರಲಾಗಿದ್ದು, ಪ್ರೀಮಿಯಂ ಎಫ್ಎಆರ್ಗಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳಿಗೆ 11 ಅನ್ನು (ಪಿಎಫ್ಎಆರ್ ಅನುಮತಿಸಲು ಶುಲ್ಕಗಳ ವಿವರ) ಸೇರ್ಪಡೆ ಮಾಡಲಾಗಿತ್ತು. 2025ರ ಜನವರಿ 4ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಏಪ್ರಿಲ್ 4ರಂದು ಅಂತಿಮ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಹೊರಡಿಸಿತ್ತು. ಆದರೆ, ನ್ಯಾಯಾಲಯದಲ್ಲಿ ಅದಕ್ಕೆ ತಡೆಯಾಗಿತ್ತು. ಹೈಕೋರ್ಟ್ ದಾವೆಯನ್ನು ಡಿ.5ರಂದು ವಜಾಗೊಳಿಸಿದ್ದು, ಜಿಬಿಎ ಪಿಎಫ್ಎಆರ್ ಅನ್ನು ಅನುಷ್ಠಾನಗೊಳಿಸಿದೆ.

ಕಟ್ಟಡ ನಿರ್ಮಿಸುವವರು ನಿವೇಶನದ ಎದುರಿನ ರಸ್ತೆಯ ಆಧಾರದಲ್ಲಿ ಪಿಎಫ್ಎಆರ್ ಪಡೆದುಕೊಳ್ಳಬಹುದು. ಇದರ ಜೊತೆಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ (ಟಿಡಿಆರ್/ ಡಿಸಿಆರ್) ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಅಂತಸ್ತುಗಳನ್ನು ನಿರ್ಮಿಸಬಹುದಾಗಿದೆ. ನಿವೇಶನದ ವಿಸ್ತೀರ್ಣದ ಮೇರೆಗೆ ಟಿಡಿಆರ್, ಪಿಎಫ್ಎಆರ್ ನಿಗದಿಯಾಗುತ್ತದೆ.

ಪ್ರತಿ ಅಂತಸ್ತನ್ನು ಹೆಚ್ಚುವರಿಯಾಗಿ ನಿರ್ಮಿಸಲು ಶೇ 28ರಷ್ಟು ಮಾರ್ಗಸೂಚಿ ದರವನ್ನು ಶುಲ್ಕವನ್ನಾಗಿ ಪಾವತಿಸಬೇಕಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಶುಲ್ಕ ಪಾವತಿಸಿ, ನಕ್ಷೆಗೆ ಮಂಜೂರಾತಿ ಪಡೆದುಕೊಳ್ಳಬೇಕು. ಈಗಾಗಲೇ ಲಭ್ಯವಿರುವ ಇಒಡಿಬಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗಳು ನಡೆಯಲಿವೆ. ಈ ಮೂಲಕ ಕಟ್ಟಡದ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್ಎಆರ್ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು. ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್ ಪ್ಲಾನ್ನ ವಲಯ ನಿಯಮಗಳ ಅನ್ವಯವೇ ಪ್ರೀಮಿಯಂ ಎಫ್ಎಆರ್ಗೆ ಅನುಮತಿ ನೀಡಲಾಗುತ್ತದೆ.

ಪ್ರೀಮಿಯಂ ಎಫ್ಎಆರ್: ವಾರ್ಷಿಕ ₹2,000 ಕೋಟಿ ನಿರೀಕ್ಷೆ

60x40 ಅಡಿ ನಿವೇಶನದ ಕಟ್ಟಡ ಮಾಲೀಕರಿಗೆ ಹೆಚ್ಚಿನ ಪ್ರಯೋಜನವಿಲ್ಲ

ಬೃಹತ್ ಕಟ್ಟಡ, ಡೆವಲಪರ್, ನಿರ್ಮಾಣದಾರರಿಗೆ ಅನುಕೂಲ

ಏನಿದು ಪ್ರೀಮಿಯಂ ಎಫ್ಎಆರ್?

ಒಂಬತ್ತು ಮೀಟರ್ನಿಂದ 12 ಮೀಟರ್ವರೆಗೆ ರಸ್ತೆ ಹೊಂದಿರುವ ನಿವೇಶನದಲ್ಲಿ ಐದು ಅಂತಸ್ತುಗಳನ್ನು ಕಟ್ಟಿದ್ದರೆ, ಅವರಿಗೆ ಇನ್ನೂ ಒಂದು ಅಂತಸ್ತು ಕಟ್ಟಿಕೊಳ್ಳಲು ಅವಕಾಶ ನೀಡುವುದೇ ಪ್ರೀಮಿಯಂ ಎಫ್ಎಆರ್. ಹೆಚ್ಚುವರಿ ಅಂತಸ್ತುಗಳಿಗೆ ಅನುಗುಣವಾಗಿ ಸೆಟ್ಬ್ಯಾಕ್, ಪಾರ್ಕಿಂಗ್ ಜಾಗ ಬಿಡಬೇಕಾಗುತ್ತದೆ. ರಸ್ತೆಯ ಅಗಲ ಹೆಚ್ಚಾಗುತ್ತಿದ್ದಂತೆಯೇ ಪ್ರೀಮಿಯಂ ಎಫ್ಎಆರ್ ಪ್ರಮಾಣವೂ
ಅಧಿಕವಾಗುತ್ತದೆ.

‘ಹಾಲಿ ಕಟ್ಟಡಗಳಿಗೆ ಶೇ 25ರಷ್ಟು ರಿಯಾಯಿತಿ’

‘ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳೂ ಪ್ರೀಮಿಯಂ ಎಫ್ಎಆರ್ ಪಡೆದುಕೊಳ್ಳಬಹುದು. ಅವರಿಗೆ ಸೆಟ್ಬ್ಯಾಕ್ನಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತದೆ’ ಎಂದು ಜಿಬಿಎ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್ ತಿಳಿಸಿದರು.

‘ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಲು ಬಯಸುವ ಕಟ್ಟಡದ ಮಾಲೀಕರು, ಅದಕ್ಕೆ ಅನುಗುಣವಾದ ಸೆಟ್ಬ್ಯಾಕ್ ಅನ್ನು ಹೊಂದಿರಬೇಕು.
ಶೇ 25ರಷ್ಟು ರಿಯಾಯಿತಿ ನೀಡಿ ಲೆಕ್ಕಾಚಾರ ಮಾಡಿ ಅವರು ಎಷ್ಟು ಅಂತಸ್ತುಗಳನ್ನು ಪ್ರೀಮಿಯಂ ಎಫ್ಎಆರ್ ಮೂಲಕ ನಿರ್ಮಿಸಬಹುದು ಎಂಬುದನ್ನು ತಿಳಿಸಲಾಗುತ್ತದೆ. ಆದರೆ, ಪಾರ್ಕಿಂಗ್ ಸೌಲಭ್ಯ ಮಾತ್ರ ನಿಯಮಗಳಂತೆಯೇ ಇರಬೇಕು’ ಎಂದು ಮಾಹಿತಿ ನೀಡಿದರು.

‘16 ಅಂತಸ್ತಿನ ಮೇಲಿನ ಕಟ್ಟಡಗಳಿಗೆ ಸೆಟ್ಬ್ಯಾಕ್ ಒಂದೇ ರೀತಿಯಲ್ಲಿದೆ. ಪಾರ್ಕಿಂಗ್ ಸೌಲಭ್ಯ ಅಗತ್ಯಕ್ಕನುಸಾರವಾಗಿದ್ದರೆ, ಅವರು ಶೇ 60ರಷ್ಟು ಪ್ರೀಮಿಯಂ ಎಫ್ಎಆರ್ ಪಡೆದುಕೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.