ಬೆಂಗಳೂರು: ‘ಯೋಜಿತವಲ್ಲದ ನಗರೀಕರಣದಿಂದಾಗಿ ಬೆಂಗಳೂರು ಸೇರಿದಂತೆ ವಿಶ್ವದ ಅನೇಕ ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ, ಪರಿಸರ ಮಾಲಿನ್ಯ ವಿಪರೀತವಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಪ್ರಾಯಪಟ್ಟರು.

ದಿ ಮಿಥಿಕ್ ಸೊಸೈಟಿ ಆಯೋಜಿಸಿದ್ದ ರಾವ್ ಬಹದ್ದೂರ್ ಎಚ್. ಕೃಷ್ಣಶಾಸ್ತ್ರಿ ಸ್ಮಾರಕ ಹಾಗೂ ಬಿಬಿಎಂಪಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಪರಿಸರವನ್ನು ಅರ್ಥೈಸಿಕೊಳ್ಳುವುದು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಅನಾಗರಿಕ ನಗರೀಕರಣದಿಂದಾಗಿ ಬೆಂಗಳೂರಿನಲ್ಲಿ ಕಾಂಕ್ರೀಟೀಕರಣ ಹೆಚ್ಚಾಗುತ್ತಿದೆ. ತಾಪಮಾನ ಅಧಿಕವಾಗುತ್ತಿದೆ. ಅವೈಜ್ಞಾನಿಕವಾಗಿ ಕಸದ ನಿರ್ವಹಣೆ, ಅಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಒತ್ತುವರಿ ಮೂಲಕ ಕೆರೆಗಳನ್ನು ನಾಶ ಮಾಡಲಾಗಿದೆ. ಇದರಿಂದಾಗಿ ಜಲ ಮರುಪೂರಣ ಕಡಿಮೆಯಾಗಿ ಅಂತರ್ಜಲ ತೀವ್ರವಾಗಿ ಕುಸಿಯುತ್ತಿದೆ’ ಎಂದು ವಿಶ್ಲೇಷಿಸಿದರು.

‘ಜಕ್ಕೂರು ಕೆರೆಯನ್ನು ಪುನಶ್ಚೇತನಗೊಳಿಸಿದ್ದರಿಂದ ಸುತ್ತಲಿನ 300 ಕೊಳವೆಬಾವಿಗಳು ಪುನಶ್ಚೇತನಗೊಂಡವು. ಸಾರಕ್ಕಿ ಕೆರೆಯ ಪುನಶ್ಚೇತನದಿಂದ ಸುತ್ತಲಿನ ಪರಿಸರ ಉತ್ತಮವಾಯಿತು. ಕೆರೆಗಳು ಸುಸ್ಥಿತಿಯಲ್ಲಿದ್ದರೆ ಅಂತರ್ಜಲ ಸುಸ್ಥಿರವಾಗಿರುತ್ತದೆ ಎಂಬುದಕ್ಕೆ ಇವೆಲ್ಲ ಉದಾಹರಣೆ. ನಗರದಲ್ಲಿ ಸುರಿಯುವ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ, ಕಾವೇರಿ, ಶರಾವತಿ, ಎತ್ತಿನಹೊಳೆಯಂತಹ ಯಾವ ಯೋಜನೆಗಳೂ ಬೇಕಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಹೆಚ್ಚು ಹಸಿರು ಇದ್ದ ಕಡೆ ವಾತಾವರಣ ತಂಪಾಗಿರುತ್ತದೆ. ಬ್ರ್ಯಾಂಡ್ ಬೆಂಗಳೂರು ಎಂದರೆ ಉತ್ತಮ ಗಾಳಿ, ನೀರಿನೊಂದಿಗೆ ಉತ್ತಮ ಪರಿಸರ ನೀಡುವ ಮೂಲಕ ವಾಸಯೋಗ್ಯ ನಗರವನ್ನಾಗಿಸುವುದು’ ಎಂದು ಅವರು ವಿವರಿಸಿದರು.

ನಗರದಲ್ಲಿ ಉದ್ಭವಿಸುತ್ತಿರುವ ಪರಿಸರ ಸಮಸ್ಯೆಗಳು ಪರಿಹಾರವಾಗಬೇಕೆಂದರೆ, ಆಡಳಿತದಲ್ಲಿ ಪರಿಸರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಜ್ಞಾನವನ್ನು ಬಳಕೆ ಮಾಡಬೇಕು. ಯುವ ಸಮುದಾಯದಲ್ಲಿ ಪರಿಸರ ಕುರಿತು ಹೆಚ್ಚು ಹೆಚ್ಚು ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದರು.

ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ.ವಿ.ನಾಗರಾಜು ಅವರು, ‘ಬೆಂಗಳೂರು ಪರಿಸರದ ಪ್ರಾಚೀನ ಕೆರೆಗಳು’ ಕುರಿತು ಉಪನ್ಯಾಸ ನೀಡಿದರು. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಇನ್ಫೊಸಿಸ್ ಸಂಸ್ಥೆಯ ಮುಖ್ಯಸ್ಥ ಎನ್.ಆರ್. ನಾರಾಯಣಮೂರ್ತಿ ಮತ್ತು ಜಲತಜ್ಞರು, ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಎಸ್.ರವಿ, ಎಂ.ಆರ್. ಪ್ರಸನ್ನಕುಮಾರ್ , ಹಿರಿಯ ಸಂಶೋಧನಾ ಸಂಯೋಜಕ ಪಿ. ಜಯಸಿಂಹ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.