ಬೆಂಗಳೂರು: ನಗರದಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಪಣ ತೊಟ್ಟಿರುವ ನಗರ ಪೊಲೀಸರು, ಕೆಲವು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ‘ಮರಳಿ ಠಾಣೆಗೆ’, ‘ಮನೆ ಮನೆಗೆ ಪೊಲೀಸರು’ ಎಂಬ ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ವೇಗ ಸಿಕ್ಕಿದೆ.

ಉದ್ಯೋಗ, ಶಿಕ್ಷಣ, ವ್ಯಾಪಾರಕ್ಕೆಂದು ರಾಜ್ಯ ಹಾಗೂ ಹೊರ ರಾಜ್ಯದಿಂದ ನಗರಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರೆಲ್ಲರಿಗೂ ಭದ್ರತೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸುತ್ತೇವೆ ಎಂದು ಪೊಲೀಸರು ಭರವಸೆ ತುಂಬುತ್ತಿದ್ದಾರೆ.

ಬೀಟ್ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇ–ಬೀಟ್ ವ್ಯವಸ್ಥೆಯಿದ್ದರೂ ಹೊಯ್ಸಳ ಸಿಬ್ಬಂದಿ ಬಡಾವಣೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದ್ದರು. ದೂರಿನ ಬೆನ್ನಲ್ಲೇ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಪೊಲೀಸ್ ಗಸ್ತು ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ.

ಪಿಎಸ್ಐ ನೇತೃತ್ವದಲ್ಲೇ ಕಾಲ್ನಡಿಗೆ: ನಗರದಾದ್ಯಂತ ಬೆಳಿಗ್ಗೆ ಮತ್ತು ಸಂಜೆ ಇ–ಬೀಟ್ ವ್ಯವಸ್ಥೆಗೆ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಅವರು ಹೊಯ್ಸಳ ವಾಹನ ಹಾಗೂ ಚೀತಾ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕರ ನಂಬಿಕೆ ಬಲಪಡಿಸಲು ಹಾಗೂ ಪೊಲೀಸ್ ಉಪಸ್ಥಿತಿ ಹೆಚ್ಚಿಸಲು ಬೀಟ್ ಸಿಬ್ಬಂದಿ, ಹೊಯ್ಸಳ ಸಿಬ್ಬಂದಿಯ ಜತೆಗೆ ಇನ್ಮುಂದೆ ಪಿಎಸ್ಐ ಶ್ರೇಣಿಯ ಅಧಿಕಾರಿಗಳೂ ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಬಡಾವಣೆಗಳ ವಿವಿಧ ರಸ್ತೆಗಳಲ್ಲಿ ವಾಹನ ರಸ್ತೆಗೆ ಇಳಿದು ಸುತ್ತಾಟ ನಡೆಸಲಿದ್ದಾರೆ. ಗಸ್ತು ವೇಳೆ ಶಂಕಿತರು ಕಂಡುಬಂದರೆ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ನಾಗರಿಕರಲ್ಲಿ ಸ್ಥೈರ್ಯ ತುಂಬಲಿದ್ದಾರೆ.

ಒಂದು ವಾರದಿಂದ ಪಶ್ಚಿಮ, ಆಗ್ನೇಯ, ವೈಟ್ಫೀಲ್ಡ್, ಉತ್ತರ ಹಾಗೂ ದಕ್ಷಿಣ, ಈಶಾನ್ಯ ವಿಭಾಗದಲ್ಲಿ ಪಿಎಸ್ಐ ನೇತೃತ್ವದಲ್ಲಿ ಕಾಲ್ನಡಿಗೆ ಗಸ್ತು ಆರಂಭವಾಗಿದೆ. ಪಶ್ಚಿಮ ವಿಭಾಗದ ಬ್ಯಾಟರಾಯನಪುರ, ಕೆಂಗೇರಿ, ಚಂದ್ರಾಲೇಔಟ್, ಜ್ಞಾನಭಾರತಿ, ಆರ್ಆರ್ ನಗರ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಗಸ್ತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹಿಂದಿನ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಬಿಬಿಎಂಪಿ ಹಾಗೂ ವಿವಿಧ ಕಂಪನಿಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದ್ದರು. ಮನವಿ ಮೇರೆಗೆ ನಗರದಲ್ಲಿ ಸಿಸಿಟಿವಿಗಳ ಕ್ಯಾಮೆರಾ ಅಳವಡಿಕೆಗೆ ವೇಗ ದೊರೆತಿದೆ.

2024ರ ಜನವರಿ 1ರ ವೇಳೆಗೆ ನಗರದಲ್ಲಿ 2,32,711 ಸಿಸಿಟಿವಿ ಕ್ಯಾಮೆರಾಗಳು ಇದ್ದವು. ಈ ವರ್ಷದ ಜೂನ್ 20ರ ವೇಳೆಗೆ ಒಟ್ಟು 5,35,815 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂದಾಜು 3 ಲಕ್ಷಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಜಿಯೊ ಟ್ಯಾಗ್ ಮಾಡಲಾಗಿದೆ. ಈ ಕ್ಯಾಮೆರಾಗಳನ್ನು ಬಳಸಿಕೊಂಡು ನಗರದಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಜನವಸತಿ ಪ್ರದೇಶಗಳು, ವ್ಯಾಪಾರಿ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್ಗಳು ಸೇರಿ ಇತರೆ ಮಹತ್ವದ ಸ್ಥಳಗಳಲ್ಲಿ ಮತ್ತಷ್ಟು ಕ್ಯಾಮೆರಾ ಅಳವಡಿಸುವಂತೆ ಕೋರಲಾಗಿದೆ. ಇನ್ನಷ್ಟು ಕ್ಯಾಮೆರಾಗಳು ಅಳವಡಿಕೆಯಾದರೆ ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾರ್ಯಾಚರಣೆಗೆ ನೆರವಾಗಲಿದೆ. ಆಗ ನಗರದ ಬಹುತೇಕ ಭಾಗವು ಕ್ಯಾಮೆರಾಗಳ ಕಣ್ಗಾವಲಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಲ್ಲದೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುವ ಸ್ಥಳಗಳನ್ನು ಕೃತಕ ಬುದ್ಧಿಮತ್ತೆ (ಎ.ಐ) ಮೂಲಕ ಪತ್ತೆಹಚ್ಚಿ ಆ ಭಾಗದಲ್ಲಿ ಹೆಚ್ಚಿನ ನಿಗಾ ಹಾಗೂ ಹೊಯ್ಸಳ ಗಸ್ತು ವಾಹನ ಹೆಚ್ಚಿಸುವ ಕಾರ್ಯವನ್ನು ಪಶ್ಚಿಮ ವಿಭಾಗದಲ್ಲಿ ಜಾರಿಗೆ ತರಲಾಗಿತ್ತು. ಅದು ಯಶಸ್ವಿಯಾದ ಬೆನ್ನಲ್ಲೇ ನಗರದ ಇತರೆ ಭಾಗಗಳಿಗೂ ವಿಸ್ತರಣೆ ಮಾಡಲಾಗಿದೆ.

ಅಪರಾಧ ಪ್ರಕರಣ ತಡೆಗಟ್ಟಲು ಸಹಾಯ

ಬೆಂಗಳೂರಿನಲ್ಲೂ ‘ಮನೆ ಮನೆ ಯೋಜನೆ’ಯನ್ನು ಜಾರಿಗೆ ತರಲಾಗಿದೆ. ನಗರದ ಮನೆಗಳಿಗೆ ಪೊಲೀಸರು ಭೇಟಿ ನೀಡುವುದರಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸಮಸ್ಯೆಗಳು ಅರಿವಿಗೆ ಬರಲಿದೆ. ಅದರಿಂದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಾಯವಾಗಲಿದೆ

– ಜಿ.ಪರಮೇಶ್ವರ ಗೃಹ ಸಚಿವ

ಗಸ್ತು ಹೆಚ್ಚಿಸುವಂತೆ ಸೂಚನೆ

ಯಾವ ಪ್ರದೇಶದಲ್ಲಿ ಯಾವ ಅವಧಿಯಲ್ಲಿ ಹೆಚ್ಚಿನ ಅಪರಾಧ ಕೃತ್ಯಗಳು ಜರುಗುತ್ತಿವೆ ಎಂಬುದರ ಬಗ್ಗೆ ಸಿಬ್ಬಂದಿ ಸ್ಪಷ್ಟ ಮಾಹಿತಿ ಪಡೆದುಕೊಂಡು ಅಂತಹ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವಂತೆ ಸೂಚಿಸಲಾಗಿದೆ

– ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್

ಅಶ್ವದಳದ ಗಸ್ತು ವಿಸ್ತರಣೆ

ವಾರಾಂತ್ಯದ ವೇಳೆ ವಿಧಾನಸೌಧ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತ ಮಹಾತ್ಮ ಗಾಂಧಿ ರಸ್ತೆ ಚರ್ಚ್ ಸ್ಟ್ರೀಟ್ ಅನಿಲ್ ಕುಂಬ್ಳೆ ವೃತ್ತ ಬ್ರಿಗೇಡ್ ರಸ್ತೆಯಲ್ಲಿ ಹೆಚ್ಚಿನ ದಟ್ಟಣೆ ಇರುತ್ತದೆ. ಕಳೆದ ವರ್ಷದಿಂದ ಅಶ್ವದಳದ ಗಸ್ತು ಆರಂಭವಾಗಿತ್ತು. ಕೆಲವು ತಿಂಗಳ ಹಿಂದೆ ಲಾಲ್ಬಾಗ್ವರೆಗೂ ಅಶ್ವದಳದ ಗಸ್ತು ವಿಸ್ತರಣೆ ಮಾಡಲಾಗಿತ್ತು. ಇದನ್ನು ಇನ್ನೂ ಕೆಲವು ಸ್ಥಳಗಳಿಗೆ ವಿಸ್ತರಣೆ ಮಾಡಲು ನಗರ ಪೊಲೀಸರು ಆಲೋಚಿಸಿದ್ದಾರೆ. ‘ಅಶ್ವದಳದಲ್ಲಿ ಗಸ್ತು ನಡೆಸುವುದರಿಂದ ಎತ್ತರದ ಸ್ಥಳದಿಂದ ವೀಕ್ಷಣೆ ಸಾಧ್ಯವಾಗಲಿದೆ. ದಟ್ಟಣೆ ಅವಧಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಶಂಕಿತ ವ್ಯಕ್ತಿಗಳ ಓಡಾಟ ನಡೆಸುತ್ತಿರುವುದು ಕಂಡುಬಂದರೂ ವಶಕ್ಕೆ ಪಡೆದು ಆಯಾ ಠಾಣೆಯ ಪೊಲೀಸರಿಗೆ ಒಪ್ಪಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಏನೆಲ್ಲ ಕ್ರಮ

ಪೊಲೀಸ್ ಠಾಣೆಗಳ ಕೆಲಸ ಕಾರ್ಯಗಳನ್ನು ಸುಧಾರಿಸಲು ‘ಮರಳಿ ಠಾಣೆ’ಗೆ ಯೋಜನೆ

ಸಂಕಷ್ಟಕ್ಕೆ ಒಳಗಾದ ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಲು ಹೊಯ್ಸಳ ಪೊಲೀಸರ ತ್ವರಿತ ಸ್ಪಂದನೆ

ಬೆಂಗಳೂರು ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನಿಂದ ‘ಸೇಫ್ ಕನೆಕ್ಟ್’ ಕಾರ್ಯಕ್ರಮ

ಸೈಬರ್ ಅಪರಾಧ ಕಡಿಮೆ ಮಾಡಲು ಹಾಗೂ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳು ಎಫ್ಎಂ ಹಾಗೂ ಆಕಾಶವಾಣಿಯ ಮೂಲಕ ಸೈಬರ್ ಅಪರಾಧಗಳ ಬಗ್ಗೆ ಅರಿವು (ಸೈಬರ್ ಟಿಪ್ ಎ ಡೇ) ಮೂಡಿಸಲಾಗುತ್ತಿದೆ

ಅಪರಾಧ ಪ್ರಕರಣ: ಇಳಿಕೆಯತ್ತ ಚಿತ್ತ

ಕಳೆದ ವರ್ಷ ನಗರದಲ್ಲಿ ಮನೆ ಕೆಲಸದವರಿಂದಲೇ ಕಳ್ಳತನ (ಶೇ 20ರಷ್ಟು ಏರಿಕೆ) ಜಾನುವಾರು ಕಳ್ಳತನ (ಶೇ 54 ) ಏರಿಕೆ ಆಗಿದ್ದವು. ಇತರೆ ಕೆಲವು ಪ್ರಕರಣಗಳೂ ಏರಿಕೆಯ ಹಾದಿಯಲ್ಲಿದ್ದವು. ಅಪಘಾತಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದ್ದವು. ಕಳ್ಳತನ ಹಾಗೂ ಅಪಘಾತಗಳನ್ನು ಕಡಿಮೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.