ಬುಧವಾರ, ಆಗಸ್ಟ್ 4, 2021
20 °C
ಲಾಕ್‌ಡೌನ್; ಪೊಲೀಸರಿಗೆ ಕಮಿಷನರ್ ವೈರ್‌ಲೆಸ್ ಸೂಚನೆ

‘ಜಗಳ–ಬಲಪ್ರಯೋಗ ಬೇಡ; ವಿವೇಚನೆಯಿಂದ ಕೆಲಸ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಿಬ್ಬಂದಿಗೆ ವೈರ್‌ಲೆಸ್ ಮೂಲಕ ಕೆಲ ಸೂಚನೆಗಳನ್ನು ನೀಡಿದ್ದಾರೆ.

* ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು.
* ಯಾವುದೇ ಪಾಸ್‌ ಇರುವುದಿಲ್ಲ. ಅಗತ್ಯ ಸೇವೆ ಸಲ್ಲಿಸುವರ ಗುರುತಿನ ಚೀಟಿ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಬೇಕು.
* ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳ ಗುರುತಿನ ಚೀಟಿ ನೋಡಿ ಬಿಡಬೇಕು.
* ಗುರುತಿನ ಚೀಟಿ ಇಲ್ಲದವರು ಹಣ್ಣು–ತರಕಾರಿ ಮಾರಾಟ ಮಾಡಲು ಬರುತ್ತಾರೆ. ಅವರಿಗೆ ಯಾವುದೇ ತೊಂದರೆ ನೀಡಬಾರದು. ವಿವೇಚನೆ ಬಳಸಿ ಕೆಲಸ ಮಾಡಬೇಕು
* ಅನಗತ್ಯವಾಗಿ ಓಡಾಡುವರ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು
* ಜನರ ಜೊತೆ ಜಗಳ ಮಾಡಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಬಲಪ್ರಯೋಗ ಮಾಡಬಾರದು
* ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಹೆಡ್ ಕಾನ್‌ಸ್ಟೆಬಲ್, ಎಎಸ್‌ಐ ಅವರೇ ಕಮಿಷನರ್ ರೀತಿಯಲ್ಲಿ ಕೆಲಸ ಮಾಡಬೇಕು. ಅವರ ಮೇಲೆ ಜವಾಬ್ದಾರಿ ಹಾಗೂ ಗೌರವ ಹೆಚ್ಚಿದೆ.
* ಹಲವು ಪೊಲೀಸ್ ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಸೇವಾ ಮನೋಭಾನವುಳ್ಳ ಜನರನ್ನು  ಸ್ವಯಂಸೇವಕರಾಗಿ ನೇಮಿಸಿಕೊಳ್ಳಾಗುತ್ತಿದೆ. ಠಾಣೆಯ ಪ್ರತಿಯೊಬ್ಬರು ಸ್ವಯಂಸೇವಕರನ್ನು ಗೌರವದಿಂದ ನೋಡಿಕೊಳ್ಳಬೇಕು
* ಸ್ವಯಂ ಸೇವಕರಿಗೆ ಜಾಕೆಟ್ ಮತ್ತು ಟೋಪಿ ನೀಡಬೇಕು.
* ಕಾನ್‌ಸ್ಟೆಬಲ್ ಜೊತೆ ರಾತ್ರಿ ಗಸ್ತು, ಪೊಲೀಸ್ ಠಾಣೆಯಲ್ಲಿ ಸಂದರ್ಶಕರ ಅಹವಾಲು ಸ್ವೀಕಾರ, ಬ್ಯಾರಿಕೇಡ್ ಬಳಿ ಕೆಲಸ, ಠಾಣೆಯಲ್ಲಿ ಬರವಣಿಗೆ– ಕಂಪ್ಯೂಟರ್ ಕೆಲಸವನ್ನು ಸ್ವಯಂಸೇವಕರಿಂದ ಮಾಡಿಸಿಕೊಳ್ಳಬೇಕು. ಅವರ ಕೈಗೆ ಲಾಠಿ, ರೈಫಲ್ ಕೊಡಬಾರದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು