ಬೆಂಗಳೂರು: ಹೂಡಿ ಉಪ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ಉಪ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಹೂಡಿ ಗ್ರಾಮ, ತಿಗಳರ ಪಾಳ್ಯ, ಸೀತಾರಾಮ ಪಾಳ್ಯ, ಬಸವನಗರ, ಸೊಣ್ಣೇನಹಳ್ಳಿ, ಎನ್‌ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಕಾರ್ಖಾನೆ, ಇಎಸ್‌ಐ ರಸ್ತೆ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್, ಪೂರ್ವ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.