ಭಾನುವಾರ, ಆಗಸ್ಟ್ 9, 2020
22 °C

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಎಡ್ಯುವರ್ಸ್ ಜ್ಞಾನದೇಗುಲ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಅರಮನೆ ಮೈದಾನ ಸಮೀಪದ ಜಯಮಹಲ್ ಹೋಟೆಲ್ ಬಳಿ ಶನಿವಾರ 11ನೇ ವರ್ಷದ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವತಿಯಿಂದ ಎಡ್ಯುವರ್ಸ್ ಜ್ಞಾನದೇಗುಲ ಆರಂಭವಾಯಿತು.

ಹಿರಿಯ ಐಎಎಸ್ ಆಧಿಕಾರಿ, ರಾಜ್ಯದ ನಿವೃತ್ತ ಪ್ರಿನ್ಸ್ ಪಲ್ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಇರುವ ವಿವಿಧ ಕಲಿಕಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಕಾಮೆಡ್ ಕೆ ಬಗ್ಗೆ ಪ್ರೊ.ಶಾಂತಾರಾಂ ಹಾಗೂ ಸಿಇಟಿ ಬಗ್ಗೆ ಕೆಇಎ ಪಿಆರ್ ಒ ಎ.ಎಸ್.ರವಿ ಮಾಹಿತಿ ನೀಡಿದರು.
ನೂರಾರು ವಿದ್ಯಾರ್ಥಿಗಳು, ಅವರ ಪೋಷಕರು ಬಂದಿದ್ದಾರೆ.

100ಕ್ಕೂ ಅಧಿಕ ಮಳಿಗೆಗಳು ವಿವಿಧ ಕಾಲೇಜುಗಳಲ್ಲಿನ ಕಲಿಕಾ ಅವಕಾಶಗಳನ್ನು ತಿಳಿಸಿಕೊಡುತ್ತಿವೆ.
ಭಾನುವಾರ ಸಂಜೆಯವರೆಗೆ ಇದು ಮುಂದುವರಿಯಲಿದೆ. ವಿವಿಧ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು