ಬೆಂಗಳೂರು: ನಗರದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರದಿಂದ ಕೆರೆಗಳಿಗೆ ಭರಪೂರ ನೀರು ಹರಿದಿದ್ದು, 183 ಕೆರೆಗಳಲ್ಲಿ 2,605 ಕೋಟಿ ಲೀಟರ್ ಸಂಗ್ರಹವಾಗಿದೆ.

ನಗರದಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ಮೇನಲ್ಲಿ ಆಗಿದ್ದು, ಒಣಗುವ ಹಂತದಲ್ಲಿದ್ದ ಕೆರೆಗಳಿಗೆ ನೀರು ಬಂದಿದೆ. ಏಪ್ರಿಲ್ 11ರಂದು 66 ಕೆರೆಗಳು ಸಂಪೂರ್ಣ ಒಣಗಿದ್ದವು. 44 ಕೆರೆಗಳಲ್ಲಿ ಅರ್ಧಕ್ಕಿಂತ ಕಡಿಮೆ ಹಾಗೂ 13 ಕೆರೆಗಳಲ್ಲಿ ಮುಕ್ಕಾಲು ಭಾಗ ನೀರಿತ್ತು. ಮೇ 20ಕ್ಕೆ 63 ಕೆರೆಗಳು ಕೋಡಿ ಹರಿದಿವೆ. 40 ಕೆರೆಗಳಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ನೀರಿದೆ.

ಯಲಹಂಕ ವಲಯದಲ್ಲಿ 19 ಕೆರೆಗಳು, ರಾಜರಾಜೇಶ್ವರಿ ನಗರ ವಲಯದಲ್ಲಿ 16 ಕೆರೆಗಳು, ಮಹದೇವಪುರ ವಲಯದಲ್ಲಿ 13 ಕೆರೆಗಳು, ಬೊಮ್ಮನಹಳ್ಳಿ ವಲಯದಲ್ಲಿ 7 ಕೆರೆಗಳು, ದಕ್ಷಿಣ ವಲಯದಲ್ಲಿ ನಾಲ್ಕು, ಪೂರ್ವ ಹಾಗೂ ದಾಸರಹಳ್ಳಿ ವಲಯದಲ್ಲಿ ತಲಾ ಎರಡು ಕೆರೆಗಳು ಪೂರ್ಣ ತುಂಬಿವೆ.

‘ತುಂಬಿರುವ ಎಲ್ಲ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಕೆರೆಗಳು ನೀರು ಹೋಗುವ ಕಾಲುವೆಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ತೆರವುಗೊಳಿಸಲು ಸಿಬ್ಬಂದಿ ನಿಯೋಜಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ’ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಯಾವ ಕೆರೆಗಳು ಭರ್ತಿ?

ಬೊಮ್ಮನಹಳ್ಳಿ: ದೊರೆಕೆರೆ, ವೆಂಕೋಜಿರಾವ್ ಕೆರೆ, ಕೂಡ್ಲು ದೊಡ್ಡಕೆರೆ, ಅಣ್ಣಪ್ಪನಕೆರೆ, ಸುಬ್ರಮಣ್ಯಪುರ ಕೆರೆ, ದೇವರಕೆರೆ, ಸುಬೇದಾರನಕೆರೆ.

ದಕ್ಷಿಣ: ಗೌಡನಪಾಳ್ಯ ಕೆರೆ, ಕೆಂಪಾಂಬುಧಿ ಕೆರೆ, ಯಡಿಯೂರು ಕೆರೆ, ಮಡಿವಾಳ ಕೆರೆ.

ಪೂರ್ವ: ಕೆಳಗಿನ ಬೈರಸಂದ್ರ ಕೆರೆ, ಹಲಸೂರು ಕೆರೆ.

ರಾಜರಾಜೇಶ್ವರಿ ನಗರ; ಭೀಮನಕಟ್ಟೆ, ಹೊಸಕೆರೆಹಳ್ಳಿ, ಗಟ್ಟಿಗೆರೆಪಾಳ್ಯ , ಹೇರೋಹಳ್ಳಿ ಕೆರೆ, ಲಿಂಗಧೀರನಹಳ್ಳಿ ಕೆರೆ, ಅಂದ್ರಹಳ್ಳಿ ಕೆರೆ, ಎಚ್. ಗೊಲ್ಲಹಳ್ಳಿ ಕೆರೆ, ಚಿಕ್ಕಬಸ್ತಿ ಕೆರೆ, ಗಾಂಧಿನಗರ ಹೊಸಕೆರೆ, ಮಂಗಮ್ಮನಹಳ್ಳಿ ಕೆರೆ, ದುಬಾಸಿಪಾಳ್ಯ ಕೆರೆ, ಕೆಂಚನಪುರ ಕೆರೆ, ಕೊಡಿಗೆಹಳ್ಳಿ, ಭೀಮನಗುಪ್ಪೆ, ಕನ್ನಳ್ಳಿ ಕೆರೆ, ಸೂಲಿಕೆರೆ.

ದಾಸರಹಳ್ಳಿ; ನೆಲಗೆದರನಹಳ್ಳಿ ಕೆರೆ, ದಾಸರಹಳ್ಳಿ ಕೆರೆ.

ಯಲಹಂಕ; ಅಗ್ರಹಾರ ಕೆರೆ, ಕೋಗಿಲು ಕೆರೆ, ಯಲಹಂಕ ಕೆರೆ, ವೀರಸಾಗರ ಕೆರೆ, ಅಟ್ಟೂರು ಕೆರೆ, ನರಸೀಪುರ ಕೆರೆ, ಜಕ್ಕೂರು ಕೆರೆ, ಅಲ್ಲಾಳಸಂದ್ರ ಕೆರೆ, ಆವಲಹಳ್ಳಿ ಕೆರೆ, ದೊಡ್ಡಬೊಮ್ಮಸಂದ್ರ ಕೆರೆ, ಪಾಲನಹಳ್ಳಿ ಕೆರೆ, ರಾಚೇನಹಳ್ಳಿ ಕೆರೆ, ಹಾರೋಹಳ್ಳಿ ಕೆರೆ, ಸಿಂಗಾಪುರ ಕೆರೆ, ಬೆಟ್ಟಹಳ್ಳಿ ಕೆರೆ, ವೆಂಕಟೇಶಪುರ ಕೆರೆ, ಅಮೃತಹಳ್ಳಿ ಕೆರೆ, ಮೇಡಿಅಗ್ರಹಾರ ಕೆರೆ, ಕಟ್ಟಿಗೇನಹಳ್ಳಿ ಕೆರೆ.

ಮಹದೇಪುರ; ಗೋಶಾಲಾ ಕೆರೆ, ಗರುಡಾಚಾರ್ ಪಾಳ್ಯ ಕೆರೆ, ಹರಳೂರು ಕೆರೆ, ಹೊರಮಾವು ಅಗರ ಕೆರೆ, ಕೌದೇನಹಳ್ಳಿ ಕೆರೆ, ಮಹದೇವಪುರ ಕೆರೆ, ನಾಗೇಶ್ವರ ನಾಗೇನಹಳ್ಳಿ ಕೆರೆ, ಪಟ್ಟಂದೂರು ಅಗ್ರಹಾರ–54 ಕೆರೆ, ಪಟ್ಟಂದೂರು ಅಗ್ರಹಾರ–124 ಕೆರೆ, ರಾಂಪುರ ಕೆರೆ, ಶೀಲವಂತನ ಕೆರೆ, ಸೀಗೇಹಳ್ಳಿ ಕೆರೆ, ವಿಜನಾಪುರ ಕೆರೆ.

ಅತಿಹೆಚ್ಚು ನೀರು ತುಂಬಿರುವ ಕೆರೆಗಳು

ಯಲಹಂಕ; 244 ಕೋಟಿ ಲೀಟರ್

ಜಕ್ಕೂರು; 109 ಕೋಟಿ ಲೀಟರ್

ರಾಂಪುರ; 108 ಕೋಟಿ ಲೀಟರ್

ಮಡಿವಾಳ; 101 ಕೋಟಿ ಲೀಟರ್

ಹಲಸೂರು; 92.5 ಕೋಟಿ ಲೀಟರ್

ರಾಚೇನಹಳ್ಳಿ; 84.9 ಕೋಟಿ ಲೀಟರ್

ದೊಡ್ಡನೆಕ್ಕುಂದಿ; 79 ಕೋಟಿ ಲೀಟರ್

ವೆಂಕೋಜಿರಾವ್; 73.6 ಕೋಟಿ ಲೀಟರ್

ದೊಡ್ಡಬೊಮ್ಮಸಂದ್ರ; 70.4 ಕೋಟಿ ಲೀಟರ್

ಹೆಬ್ಬಾಳ; 68 ಕೋಟಿ ಲೀಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.