ಬೆಂಗಳೂರು: 6 ರಿಂದ 18 ವರ್ಷದೊಳಗಿನ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಕೋವಿಡ್ ಕಾರಣದಿಂದಾಗಿ ಕಬ್ಬಿಣಾಂಶ ಮಾತ್ರೆಗಳು ದೊರೆಯುತ್ತಿಲ್ಲ.

ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಕಬ್ಬಿಣಾಂಶ ಇರುವ ಮಾತ್ರೆಗಳಲ್ಲಿ ವಿತರಿಸಲಾಗುತ್ತಿತ್ತು. ಕೋವಿಡ್ ಕಾರಣಕ್ಕೆ ಶಾಲೆಗಳು ಬಂದ್ ಆಗಿರುವುದರಿಂದಾಗಿ ಮಕ್ಕಳಿಗೆ ಮಾತ್ರ ಪೂರೈಕೆ ನಿಂತಿದೆ. ಮನೆಗೆ ಮಾತ್ರ ತಲುಪಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಕೋವಿಡ್ ಕಾರ್ಯನಿರ್ವಹಣೆಯಲ್ಲಿ ತೊಡಗಿರುವುದರಿಂದಾಗಿ ಅದೂ ತಪ್ಪಿದಂತಾಗಿದೆ. ಪ್ರತಿ ವಾರ ಶಾಲೆಗಳಲ್ಲಿ ವಿತರಿಸಲಾಗುತ್ತಿದ್ದ ಈ ಮಾತ್ರೆಗಳುಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ರಕ್ತಹೀನತೆ ತಡೆಯಲು ಸಹಕಾರಿಯಾಗಿತ್ತು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್ಬಿಎಸ್ಕೆ) ಆರೋಗ್ಯ ಇಲಾಖೆಯು ಈ ಮಾತ್ರೆಗಳನ್ನು ಕೆಲ ವರ್ಷಗಳಿಂದ ಶಾಲೆಗಳ ಮೂಲಕ ನಿಯಮಿತವಾಗಿ ನೀಡುತ್ತಾ ಬಂದಿದೆ.10 ವರ್ಷದೊಳಗಿನ ಮಕ್ಕಳಿಗೆ 45 ಮಿ.ಗ್ರಾಂ ಮೂಲ ಕಬ್ಬಿಣಾಂಶ ಮತ್ತು 400 ಮೈಕ್ರೋ ಗ್ರಾಂನಷ್ಟು ಪೋಲಿಕ್ ಆಸಿಡ್ ಹೊಂದಿರುವ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಹದಿಹರೆಯದವರಿಗೆ 100 ಮಿ.ಗ್ರಾಂ ಮೂಲ ಕಬ್ಬಿಣಾಂಶ ಮತ್ತು 500 ಎಂಸಿಜಿ ಪೋಲಿಕ್ ಆಸಿಡ್ ಹೊಂದಿರುವ ಮಾತ್ರೆಗಳನ್ನು ವಿತರಿಸಾಗುತ್ತಿತ್ತು.ಶಾಲೆಗಳು ಪ್ರಾರಂಭವಾದ ಬಳಿಕವೇ ಈ ಮಾತ್ರೆಗಳನ್ನು ವಿತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಸಮಸ್ಯೆ ಹೆಚ್ಚುವ ಸಾಧ್ಯತೆ

‘ಮಕ್ಕಳು ಹಾಗೂ ಹದಿಹರೆಯದವರು ನಿಯಮಿತವಾಗಿ ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸಬೇಕು. ಇಲ್ಲವಾದಲ್ಲಿ ಕೆಲವರಿಗೆ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಬ್ಬಿಣಾಂಶದ ಕೊರತೆ ಇರುವವರಲ್ಲಿ ಆಯಾಸ, ನಿಶ್ಯಕ್ತಿ, ಉಸಿರಾಟದ ತೊಂದರೆ, ಅನಿಯಮಿತ ಹೃದಯ ಬಡಿತ, ತಲೆನೋವು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿರ್ಲಕ್ಷ್ಯ ಮಾಡದೆ ಪಾಲಕರು ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್ ತಿಳಿಸಿದರು.

‘ಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ರಕ್ತಹೀನತೆಗೆ ಚಿಕಿತ್ಸೆಗಳು ಲಭ್ಯವಿದೆ. ಇದನ್ನು ತಡೆಯಲು ಮಾತ್ರೆಗಳ ಜತೆಗೆ ಕಬ್ಬಿಣಾಂಶ ಅಧಿಕವಿರುವ ಆಹಾರವನ್ನು ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆಗಳು ಲಭ್ಯವಿರುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.