ಬೆಂಗಳೂರು:ಮಹಿಳೆಯರಿಗೆ ಅವರು ಉದ್ಯೋಗ ಮಾಡುವ ಸ್ಥಳದಲ್ಲಿ ಹೈಟೆಕ್ ವ್ಯವಸ್ಥೆಯನ್ನು ‘ಪ್ರಾಜೆಕ್ಟ್ ರಶ್ಮಿ’ ಒದಗಿಸುತ್ತಿದೆ. ಇಲ್ಲಿ ಶೌಚಾಲಯ, ಮಗುವಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ಕೊಠಡಿ, ಟಿ.ವಿ ನೋಡಲು, ಕೇರಂ, ಚೆಸ್ ಮುಂತಾದ ಕ್ರೀಡೆಗಳನ್ನಾಡುವ ಕೊಠಡಿ ಇದೆ. ಜೊತೆಗೆ ಇಲ್ಲಿ ಪತ್ರಿಕೆ, ನಿಯತಕಾಲಿಕಾಲಿಕಗಳನ್ನು ಓದುವ ಅವಕಾಶವೂ ಇದೆ. ವಿಶಾಲವಾದ ಅಡಿಗೆಕೋಣೆಯೂ ಇದ್ದು, ಊಟ ಮಾಡುವುದಕ್ಕಾಗಿ ಕೊಠಡಿಯ ವ್ಯವಸ್ಥೆಯೂ ಇದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ.