ಮಂಗಳವಾರ, ಮಾರ್ಚ್ 9, 2021
31 °C

17ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿ ಕಟ್ಟಡವೊಂದರ 17ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಯುವತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. 

ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಶುಭ ಎಂಬ‌ ಯುವತಿಯೇ ಆತ್ಮಹತ್ಯೆಗೆ ಯತ್ನಿಸಿದವಳು.

ದೆಹಲಿಯ ಶುಭ ಮಾನಸಿಕವಾಗಿ ನೊಂದಿದ್ದಳು. ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್‌ ಸನ್‌ರೈಸ್ ಅಪಾರ್ಟೆಂಟ್‌ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ. ಲಾಕ್ ಡೌನ್ ಇದ್ದದ್ದರಿಂದ ದೆಹಲಿಗೆ ವಾಪಸು ಹೋಗಲು ಆಗಿರಲಿಲ್ಲ.

ಕೆಲ‌ ವರ್ಷಗಳ‌ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದ ಯುವತಿ. ತನ್ನ ಸಂಬಂಧಿ ಮನೆಯಲ್ಲಿ ತನ್ನ ತಾಯಿಯ ವರ್ಷದ ಕಾರ್ಯ ನಡೆದಿತ್ತು. ಹೀಗಾಗಿ ಅದರಿಂದ ಇನ್ನಷ್ಟು‌ ನೊಂದಿದ್ದ ಯುವತಿ..

ಅಪಾರ್ಟ್ಮೆಂಟ್ ನ 17ನೇ ಮಹಡಿಗೆ ಏರಿ ಕುಳಿತಿದ್ದ ಯುವತಿ, ಅಲ್ಲಿಂದ ಬೀಳಲು ಯತ್ನಿಸುತ್ತಿದ್ದಳು. ಅದನ್ನು ಗಮನಿಸಿದ ಅಪಾರ್ಟ್ಮೆಂಟ್‌ನ ವ್ಯಕ್ತಿಯೊಬ್ಬ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ, ಯುವತಿಯ ಮನವೊಲಿಸಿ ರಕ್ಷಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು