ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಜರಾತಿ ಕೊರತೆ ಇದ್ದರೆ ಪ್ರವೇಶಪತ್ರ ಇಲ್ಲ

ಪಿಯು: ಆನ್‌ಲೈನ್ ಮೂಲಕ ಪ್ರವೇಶಪತ್ರ ರವಾನೆ
Last Updated 13 ಫೆಬ್ರುವರಿ 2020, 18:36 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್ 4ರಿಂದ ಆರಂಭವಾಗುವ ದ್ವಿತೀಯ ಪರೀಕ್ಷೆಯ ಪ್ರವೇಶ ಪತ್ರ ಮತ್ತು ವಿದ್ಯಾರ್ಥಿಗಳ ಪಟ್ಟಿಗಳನ್ನು ಆನ್‌ಲೈನ್‌ ಮೂಲಕ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಲಾಗಿದ್ದು, ಹಾಜರಾತಿ ಕೊರತೆ ಇದ್ದವರಿಗೆ ಪ್ರವೇಶ ಪತ್ರ ನೀಡದಂತೆ ಸೂಚಿಸಲಾಗಿದೆ.

ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಯ ಮೂಲ ಪ್ರವೇಶಪತ್ರದ ಮೇಲೆ ‘ಎಸ್‌ಎಟಿ‘ ಎಂದು ನಮೂದಿಸಿ, ಪಟ್ಟಿ ಮಾಡಿ ಇದೇ 15ರೊಳಗೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಬೇಕು. ಇಂತಹ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ವಿತರಿಸಿದಲ್ಲಿ ಅಥವಾ ಕಾಲೇಜಿನಲ್ಲಿ ಉಳಿಸಿಕೊಂಡರೆ, ಮುಂದೆ ಎದುರಾಗಬಹುದಾದ ಯಾವುದೇ ತೊಂದರೆಗಳಿಗೆ ಪ್ರಾಂಶುಪಾಲರೇ ಹೊಣೆಗಾರರರು ಆಗಿರುತ್ತಾರೆ ಎಂದು ನಿರ್ದೇಶಕರು ಎಚ್ಚರಿಸಿದ್ದಾರೆ.

ಪ್ರವೇಶಪತ್ರಗಳಲ್ಲಿನ ತಿದ್ದುಪಡಿಗಳ ಕ್ರೋಢೀಕೃತ ಮಾಹಿತಿಯನ್ನು ಸಹ ಇದೇ 15ರೊಳಗೆ ಕೇಂದ್ರ ಕಚೇರಿಗೆ ಕಳುಹಿಸಿಕೊಡಲು ಸೂಚಿಸಲಾಗಿದೆ.

ಈ ಮಧ್ಯೆ, ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾದ ಕರಡು ಪ್ರವೇಶಪತ್ರಗಳಲ್ಲಿ ಒಂದು ಲಕ್ಷ ತಿದ್ದುಪಡಿ ಮಾಡಿರುವುದು ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT