ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ಇದು ಸಾರ್ವಜನಿಕ ಸೇವೆಯೋ, ಲೂಟಿಯೋ: ಮೆಟ್ರೊ ಪ್ರಯಾಣ ದರ ಏರಿಕೆಗೆ ಆಕ್ರೋಶ

Published : 5 ಫೆಬ್ರುವರಿ 2026, 20:52 IST
Last Updated : 5 ಫೆಬ್ರುವರಿ 2026, 20:52 IST
ಫಾಲೋ ಮಾಡಿ
Comments
ಜನರು ಅತ್ತ ದರಿ ಇತ್ತ ಪುಲಿ ಎಂಬಂತಹ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಸರ್ಕಾರಕ್ಕೆ ಮತ್ತು ನಮ್ಮ ಮೆಟ್ರೊಗೆ ತಿಳಿದಿದೆ. ಜನರು ದುಬಾರಿ ದರ ಪಾವತಿಸಬೇಕು ಇಲ್ಲವೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳಬೇಕು. ಜನರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
– ಜಿ. ಶಶಿಕುಮಾರ್, ಬೆಂಗಳೂರು ಉಳಿಸಿ ಸಮಿತಿ ಸಂಚಾಲಕ
ಈಗಾಗಲೇ ಸಾಮಾನ್ಯ ಜನರ ಕೈಗೆಟುಕದಂತಾಗಿರುವ ನಮ್ಮ ಮೆಟ್ರೊ ದರ ಮತ್ತಷ್ಟು ದುಬಾರಿಯಾಗಲಿದೆ. ದರ ನಿಗದಿ ಸಮಿತಿ ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಕಡ್ಡಾಯವಾಗಿ ದರ ಏರಿಕೆ ಮಾಡಬೇಕು ಎಂದು ಬಿಎಂಆರ್‌ಸಿಎಲ್‌ ಅಂದುಕೊಂಡಿದೆ. ಹಾಗಾದರೆ ಅದೇ ದರ ನಿಗದಿ ಸಮಿತಿ ಕಳೆದ ವರ್ಷ ಶೇ 51.55 ಏರಿಕೆ ಮಾಡಿ ಎಂದು ಶಿಫಾರಸು ಮಾಡಿದ್ದಾಗ ಶೇ 100ರಷ್ಟು ಯಾಕೆ ಮಾಡಿತು? ಪ್ರಯಾಣಿಕರ ವಿರೋಧ ಬಂದ ಮೇಲೆ ಶೇ 71.5ಕ್ಕೆ ಯಾಕೆ ಇಳಿಸಿತು?
– ಶ್ರೀಯಾ, ಮೆಟ್ರೊ ಪ್ರಯಾಣಿಕರು
ಕಳೆದ ವರ್ಷ ಜನರ ವಿರೋಧದ ನಡುವೆಯೂ ಶೇ 100 ದರ ಹೆಚ್ಚಿಸುವ ಮೂಲಕ ಬಿಎಂಆರ್‌ಸಿಎಲ್‌ ಜನವಿರೋಧಿ ಎಂಬುದನ್ನು ಸಾಬೀತು ಮಾಡಿತ್ತು. ಈಗ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಿರುವುದು ನಾಚಿಕೆಗೇಡಿನ ವರ್ತನೆಯಾಗಿದೆ. ಮೆಟ್ರೊ ಪ್ರಯಾಣಿಕರು ಈ ದರ ಹೆಚ್ಚಳವನ್ನು ಒಪ್ಪುವುದಿಲ್ಲ. 
– ರಾಜೇಶ್ ಭಟ್, ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಘಟನೆ ಸದಸ್ಯ
‘ನಮ್ಮ ವ್ಯಾಪ್ತಿಯಲ್ಲಿಲ್ಲ’
ಮೆಟ್ರೊ ದರ ಏರಿಕೆ ವಿಚಾರ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ. ಕೇಂದ್ರದ ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ಪ್ರತಿನಿಧಿಗಳಿದ್ದರೂ ತೀರ್ಮಾನ ಮಾಡುವುದು ಅವರೇ. ಬಿಎಂಆರ್‌ಸಿಎಲ್‌ಗೆ ಕೇಂದ್ರ ಸರ್ಕಾರ ಕೇವಲ ಶೇ 12ರಷ್ಟು ಅನುದಾನ ನೀಡುವುದು. ಆದರೆ ಅಧ್ಯಕ್ಷರು ಮಾತ್ರ ಕೇಂದ್ರ ಸರ್ಕಾರದವರೇ ನಾಮನಿರ್ದೇಶನ ಮಾಡಿದವರು ಇರುತ್ತಾರೆ. ರಾಜ್ಯದವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಅವಕಾಶ ಕೊಡಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT