ಬೆಂಗಳೂರು: ‘ರೈನ್ ಬೋ ಆಸ್ಪತ್ರೆಯು ಸಾರ್ವಜನಿಕರಿಗೆ ಸುಲಭವಾಗಿ ಲಸಿಕೆ ಸಿಗಬೇಕು ಎಂಬ ಉದ್ದೇಶದಿಂದ ನಗರದ ಎಲ್ಲಾ ಮಾಲ್ಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವ ಆಲೋಚನೆ ಹೊಂದಿದೆ’ ಎಂದು ಆಸ್ಪತ್ರೆಯ ಉಪಾಧ್ಯಕ್ಷ (ಕಾರ್ಯಾಚರಣೆ) ಅಕ್ಷಯ್ ಹೇಳಿದರು.

ಹೆಬ್ಬಾಳದ ಎಸ್ಟೀಮ್ ಮಾಲ್ನಲ್ಲಿ ಆರಂಭಿಸಿರುವ ಲಸಿಕಾ ಕೇಂದ್ರವನ್ನು ನಟಿ ಖುಷಿ ರವಿ ಹಾಗೂ ಬಿಗ್ಬಾಸ್ ಸ್ಪರ್ಧಿ ಶಶಿಕುಮಾರ್ ಶನಿವಾರ ಉದ್ಘಾಟಿಸಿದರು.

‘ಕೋವಿಡ್ ಮೂರನೇ ಅಲೆಯ ಅಪಾಯದಿಂದ ಪಾರಾಗಬೇಕಾದರೆ ಲಸಿಕೆ ಪಡೆಯುವುದು ತುಂಬಾ ಅವಶ್ಯ. ಹೀಗಾಗಿ ನಾವು ಲಸಿಕಾ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ನಾಗರಿಕರು ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬಹುದು’ ಎಂದು ಅಕ್ಷಯ್ ತಿಳಿಸಿದರು.

‘ಜನರಿಗೆ ಸುಲಭವಾಗಿ ಲಸಿಕೆ ಸಿಗಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನೂ ಮಾಲ್ನಲ್ಲಿ ಮಾಡಲಾಗಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು’ ಎಂದು ಎಸ್ಟೀಮ್ ಮಾಲ್ನ ಮಾಲೀಕ ಅಭಿಷೇಕ್ ಅಹುಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.