ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌. ನಗರ: ಗೆಲ್ಲುವ ವಿಶ್ವಾಸವಿದೆ ಎಂದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 26.58 ರಷ್ಟು ಮತದಾನ
Last Updated 3 ನವೆಂಬರ್ 2020, 8:25 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ನನ್ನ ಮತ ನನ್ನ ಹಕ್ಕು. ನೊಂದವರ ಪರವಾಗಿ ಕೆಲಸ ಮಾಡುವ ಹೆಣ್ಣು ಮಗಳಿಗೆ ಮತ ಹಾಕಿದ್ದೇನೆ‌. ಚುನಾವಣೆ ಆಯೋಗ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಹೀಗಾಗಿ, ಜನರು ನಿರಾತಂಕವಾಗಿ ಮತದಾನ ಮಾಡಬೇಕು. ನೂರರಷ್ಟು ನಾನು ಗೆಲ್ಲುವ ವಿಶ್ವಾಸದಲ್ಲಿ ಇದ್ದೇನೆ’ ಎಂದು ಆರ್‌.ಆರ್‌. ನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹೇಳಿದರು.

ಮತದಾನ ಮಾಡುವ ಮೊದಲು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಜ್ಞಾನಭಾರತಿ ವಾರ್ಡ್‌ನ ಮತಗಟ್ಟೆ 304ರಲ್ಲಿ ಮತ ಚಲಾಯಿಸಿದ ಅವರು, ‘ನೊಂದವರ ಪರ, ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಜನ ಮತ ಹಾಕುತ್ತಾರೆ ಎಂಬ ವಿಶ್ವಾಸ ಇದೆ. ಯುವಕರು ಬಂದು ಮತ ಚಲಾಯಿಸಬೇಕು. ಮತ ಚಲಾವಣೆ ಯುವಕರ ಹಕ್ಕು. ಎಲ್ಲರೂ ಬಂದು ಯುವ ಜನತೆ ಪ್ರತಿನಿಧಿಯಾದ ನನಗೆ ಮತ ಚಲಾವಣೆ ಮಾಡಿ’ ಎಂದೂ ಮನವಿ ಮಾಡಿದರು.

ಆರ್‌.ಆರ್. ನಗರ ಕ್ಷೇತ್ರ ಬೆಂಗಳೂರು ವ್ಯಾಪ್ತಿಯಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತಗಟ್ಟೆಗಳತ್ತ ಮತದಾರರು ಮಂದಗತಿಯಲ್ಲಿ ಬರುತ್ತಿದ್ದು. ಮತದಾರರಿಗಿಂತ ಹೆಚ್ಚಾಗಿ ಚೀಟಿ ಬರೆಯುವವರು ಕಾಣಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಮೊದಲ ಒಂದು ಗಂಟೆ ಅವಧಿಯಲ್ಲಿ ಶೇ 6ರಷ್ಟು ಮತದಾನ

ಬಿಇಟಿ ಕಾನ್ವೆಂಟ್‌ನ ಮತಟಗಟೆಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ , ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಮತಗಟ್ಟೆಯಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ

ಮತದಾರರ ದೇವರ ತೀರ್ಪು ಅಂತಿಮ: ಮುನಿರತ್ನ
ಬೆಂಗಳೂರು:
‘ಮತದಾರರ ಬಳಿ ಮತ ಭಿಕ್ಷೆ ಕೇಳಿದ್ದೇನೆ. ಅವರು ಅಭಿವೃದ್ಧಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಆರ್‌.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.

‘ಈ ದಿನ ನೆನಪಿನಲ್ಲಿ ಉಳಿಯುವ ದಿನ.‌ ಸ್ಯಾನಿಟೈಸ್, ಮಾಸ್ಕ್, ಅಂತರ ಕಾಪಾಡಿಕೊಂಡು ಮತದಾನ‌ ಮಾಡುವುದು ವಿಷೇಶವಾದದ್ದು’ ಎಂದರು.

‘ಮತದಾರ ದೇವರು ನೀಡುವ ತೀರ್ಪು ಅಂತಿಮ. ದಯವಿಟ್ಟು ಎಲ್ಲರೂ ಮತದಾನ ಮಾಡಬೇಕು’ ಎಂದೂ ಮನವಿ ಮಾಡಿದರು.
ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಮುನಿರತ್ನ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT