ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ| ಪವಿತ್ರಾಗೌಡ ಮೇಕಪ್ ಮಾಡಿಕೊಳ್ಳಲು ಅವಕಾಶ: ನೋಟಿಸ್‌ಗೆ ವಿವರಣೆ

Published 27 ಜೂನ್ 2024, 23:30 IST
Last Updated 27 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ  ಮೊದಲ ಆರೋಪಿ ಪವಿತ್ರಾಗೌಡ ಅವರಿಗೆ ಮೇಕಪ್‌ ಮಾಡಿಕೊಳ್ಳಲು ಅವಕಾಶ ನೀಡಿ ಕರ್ತವ್ಯ ಲೋಪ ಎಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್‌ಗೆ ಮಹಿಳಾ ಪಿಎಸ್‌ಐಯೊಬ್ಬರು ವಿವರಣೆ ನೀಡಿದ್ದಾರೆ.

ಸ್ಥಳ ಮಹಜರು ಹಾಗೂ ಮಹಿಳಾ ಸಾಂತ್ವನ ಕೇಂದ್ರದಿ‌ಂದ ಅನ್ನಪೂರ್ಣೇಶ್ವರಿ‌ನಗರ ಠಾಣೆಗೆ ಆರೋಪಿಯನ್ನು ಕರೆತರಲು ಕರ್ತವ್ಯಕ್ಕೆ ನಿಯೋಜಿಸಿದ್ದ ಮಹಿಳಾ ಪಿಎಸ್‌ಐ‌ ಒಬ್ಬರಿಗೆ ಪಶ್ಚಿಮ ವಿಭಾಗದ ಡಿಸಿಪಿ ನೋಟಿಸ್ ಜಾರಿ ಮಾಡಿದ್ದರು. ಪವಿತ್ರಾಗೌಡ ಅವರ ಬಳಿ ಮೇಕಪ್ ಬಾಕ್ಸ್ ಇದ್ದ ಮಾಹಿತಿ ಇರಲಿಲ್ಲ ಎಂಬುದಾಗಿ ಅವರು ಉತ್ತರಿಸಿದ್ದಾರೆ ಎಂದು ಗೊತ್ತಾಗಿದೆ.

‘ಪ್ರಜಾವಾಣಿ'ಯ ಜೂನ್ 27ರ (ಗುರುವಾರ) ಸಂಚಿಕೆಯ ಪುಟ 6ರಲ್ಲಿ ಪ್ರಕಟವಾಗಿದ್ದ ವರದಿಯಲ್ಲಿದ್ದ ಹೆಸರಿನ ಮಹಿಳಾ ಪಿಎಸ್ಐಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಅಂದು ಆರೋಪಿಯ ಜತೆಗೆ ಕರ್ತವ್ಯದಲ್ಲಿದ್ದ ಮತ್ತೊಬ್ಬ ಮಹಿಳಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT