ಬೆಂಗಳೂರು: ‘ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು. ಇದನ್ನೇ ಅಂಬೇಡ್ಕರ್ ಅವರು ಪ್ರತಿಪಾದಿಸಿರುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ, ಕನಕಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉನ್ನತ ಜಾತಿಯಲ್ಲಿ ಬಡವರಿದ್ದರೂ ಸ್ವಾಮಿ, ಬುದ್ಧಿ ಎಂದು ಕರೆಯುತ್ತೇವೆ. ದಲಿತರಾಗಿದ್ದರೆ ಶ್ರೀಮಂತನಾಗಿದ್ದರೂ, ವಿದ್ಯಾವಂತನಾಗಿದ್ದರೂ ಏನಯ್ಯ ಚೆನ್ನಾಗಿದ್ದೀಯಾ ಎಂದು ಕೇಳುತ್ತೇವೆ. ಜಾತಿಯಿಂದ ಬಂದ ಅಸಮಾನತೆ ಆಳವಾಗಿ ಬೇರೂರಿರುವುದೇ ಇದಕ್ಕೆ ಕಾರಣ’ ಎಂದರು.

ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗಬೇಕಿದ್ದರೆ ಅಸಮಾನತೆ ಹೋಗಬೇಕು. ಎಲ್ಲರೂ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಆದರೆ, ಜಾತಿ ವ್ಯವಸ್ಥೆ ಹೋಗದೇ ಸಮಸಮಾಜ ನಿರ್ಮಾಣವಾಗದು ಎಂದು ತಿಳಿಸಿದರು.

‘ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದರಿಂದ ಹೀಗೆ ಜನಿಸಿದ್ದೆ. ಹಣೆಬರಹದಲ್ಲಿ ಇದ್ದಿದ್ದು ಆಗಿದೆ ಎಂದು ಅನೇಕರು ಹೇಳುತ್ತಾರೆ. ಹಿಂದಿನ ಜನ್ಮವೂ ಇಲ್ಲ. ಮುಂದಿನ ಜನ್ಮವೂ ಇಲ್ಲ. ಅದರಿಂದ ಹೊರಗೆ ಬರಬೇಕು. ಮೌಢ್ಯವನ್ನು ನಂಬಬೇಡಿ ಅಂದರೂ ಬಿಡಲು ಒಪ್ಪುವುದಿಲ್ಲ. ಯಾಕೆಂದರೆ ಪಟ್ಟಭದ್ರ ಹಿತಾಸಕ್ತಿಗಳು ಮೌಢ್ಯಗಳನ್ನು ಗಟ್ಟಿಗೊಳಿಸುತ್ತಿವೆ. ಮೌಢ್ಯಗಳಿಗೆ ದಾಸರಾಗಬೇಡಿ. ವಿಚಾರಗಳಿಗೆ ದಾಸರಾಗಿ’ ಎಂದು ಸಲಹೆ ನೀಡಿದರು.

‘ಮಹನೀಯರು ಆಕಸ್ಮಿಕವಾಗಿ ಒಂದು ಜಾತಿಯಲ್ಲಿ ಹುಟ್ಟಿರಬಹುದು. ಅದಕ್ಕೆ ಆಯಾ ಜಾತಿಯವರೇ ಜಯಂತಿ ಆಚರಿಸಬಾರದು. ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂಬ ಕಾರಣಕ್ಕೆ ಸರ್ಕಾರವೇ ಜಯಂತಿಗಳನ್ನು ಆಚರಿಸುತ್ತಿದೆ. ದಾರ್ಶನಿಕರು ಒಂದು ಜಾತಿಗಲ್ಲ, ಜಗತ್ತಿಗೆ ಸೇರಿದವರು ಎಂದು ಸಾರುವುದು ಇದರ ಉದ್ದೇಶ’ ಎಂದರು.

ಚಂದ್ರಕಾಂತ ಬಿಜ್ಜರಗಿ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು ಅಕ್ಕಮಹಾದೇವಿ ಅವರಿಗೆ ಕನಕ ಗೌರವ ಪ್ರಶಸ್ತಿ, ರವೀಂದ್ರ ಲಂಜವಾಡಕರ್ ಅವರಿಗೆ ಕನಕ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ, ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪಕಟ್ಟಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಇಲಾಖೆ ಕಾರ್ಯದರ್ಶಿ ಕುಮಾರ್, ನಿರ್ದೇಶಕಿ ಕೆ.ಎಂ. ಗಾಯಿತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.