ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲೇ ಆವಿಷ್ಕಾರ ನಡೆಯಲಿ: ಡಾ.ಎನ್.ಕೆ.ವೆಂಕಟರಮಣ

ರೇವಾ ವಿ.ವಿ: ಬಹುಶಿಸ್ತೀಯ ಅಧ್ಯಯನ ಶಾಲೆ ಉದ್ಘಾಟನೆ
Last Updated 11 ಮಾರ್ಚ್ 2020, 23:12 IST
ಅಕ್ಷರ ಗಾತ್ರ

ಯಲಹಂಕ: ವಿಜ್ಞಾನ- ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳ ವಿಚಾರಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಅನುಸರಿಸುವ ಬದಲು ನಮ್ಮ ದೇಶದಲ್ಲೇ ನೂತನ ಆವಿಷ್ಕಾರಗಳು ನಡೆಯಬೇಕು ಎಂದು ಬ್ರೈನ್ ನ್ಯೂರೊ ಸ್ಪೈನ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ಅಭಿಪ್ರಾಯ ವ್ಯಕ್ತಪಡಿಸಿದರು.

ರೇವಾ ವಿಶ್ವವಿದ್ಯಾಲಯದಲ್ಲಿ ಬಹುಶಿಸ್ತೀಯ ಅಧ್ಯಯನ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ವಿಜ್ಞಾನ ಬೆಳೆದಂತೆ ಸಮಸ್ಯೆಗಳ ಸಂಕೀರ್ಣತೆಯೂ ಬೆಳೆಯುತ್ತಿದ್ದು, ಏಕ ಆಯಾಮದ ಪರಿಹಾರಗಳು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತಿವೆ. ಈ ನಿಟ್ಟಿನಲ್ಲಿ ಬಹುಶಿಸ್ತೀಯ ತಂತ್ರಜ್ಞಾನದ ಬೆಳವಣಿಗೆ ಅಗತ್ಯವಾಗಿದ್ದು, ಈ ಉದ್ದೇಶದಿಂದ ಈ ಅಧ್ಯಯನ ವಿಭಾಗ ಆರಂಭಿಸಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ‘ರೇವಾ-ಸೆಂಟಮ್’ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಭಾಗವಾಗಿ ರೇವಾ-ಸೆಂಟಮ್ ಸ್ಥಾಪನೆಗೆ ಚಾಲನೆ ನೀಡಲಾಯಿತು. ಅನ್ವಯಿಕ ವಿಜ್ಞಾನ ಶಾಲೆಯ ನಿರ್ದೇಶಕಿ ಡಾ.ಬೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT