ಮಂಗಳವಾರ, ಜನವರಿ 21, 2020
29 °C

ಜೀವಂತ ಗುಂಡು ಸಮೇತ ಪಿಸ್ತೂಲ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಏಳು ಜೀವಂತ ಗುಂಡುಗಳ ಸಮೇತ ನಾಡಪಿಸ್ತೂಲ್ ಹಾಗೂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ದೇವಸಂದ್ರದ ಶಮ್ಮು (35) ಹಾಗೂ ಚಿತ್ರದುರ್ಗದ ಆಸಿಫ್ ಬಂಧಿತರು.

‘ಡಿ. 18ರಂದು ವಿದ್ಯಾರಣ್ಯಪುರ ಬಳಿ ಆರೋಪಿಗಳು ಓಡಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಲಾಯಿತು. ಕಾರಿನಲ್ಲಿ ಪಿಸ್ತೂಲ್‌, 1 ಕೆ.ಜಿ ಬೆಳ್ಳಿ ಆಭರಣ ಹಾಗೂ 200 ಗ್ರಾಂ ಚಿನ್ನಾಭರಣ ಸಿಕ್ಕವು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರೋಪಿಗಳು ಹಲವೆಡೆ ದರೋಡೆ ಮಾಡಿರುವ ಮಾಹಿತಿ ಇದೆ. ವಿದ್ಯಾರಣ್ಯಪುರದಲ್ಲೂ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಸಂಚು ರೂಪಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಅವರಿಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು