ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾಪ್ ಕೊಡುವ ನೆಪದಲ್ಲಿ ₹ 8 ಸಾವಿರ ದೋಚಿದರು

Last Updated 3 ಫೆಬ್ರುವರಿ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‍ಗಾಗಿ ಕಾಯುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡ ದುಷ್ಕರ್ಮಿಗಳು, ಎಟಿಎಂ ಪಾಸ್‍ವರ್ಡ್ ಪಡೆದು ₹ 8 ಸಾವಿರ ದೋಚಿದ ಘಟನೆ ವಿಜಯನಗರದ ಮಾರುತಿನಗರದಲ್ಲಿ ನಡೆದಿದೆ.

ಸಂದೇಶ್ ದರೋಡೆಗೊಳಗಾದವರು. ಜ. 2ರಂದು ಬೆಳಿಗ್ಗೆ 6 ಗಂಟೆಗೆ ಅವರು ಮಾರುತಿ ಮಂದಿರ ಬಳಿ ಬಸ್‍ಗಾಗಿ ಕಾಯುತ್ತಿದ್ದರು. ಆಗ ಕಾರಿನಲ್ಲಿ ಬಂದ ಮೂವರು, ಕಾರು ಮೆಜೆಸ್ಟಿಕ್‍ ಕಡೆಗೆ ಹೋಗುತ್ತಿದ್ದು, ಡ್ರಾಪ್ ಕೊಡುತ್ತೇವೆ ಎಂದು ಹೇಳಿ ಅವರನ್ನು ಹತ್ತಿಸಿಕೊಂಡಿದ್ದರು.

ಕಾರು ಸ್ವಲ್ಪ ದೂರ ತಲುಪಿದಾಗ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸಂದೇಶ್‌ ಅವರ ಹೊಟ್ಟೆಯ ಭಾಗಕ್ಕೆ ಡ್ರ್ಯಾಗರ್ ಇಟ್ಟು ಬೆದರಿಸಿದರೆ, ಮತ್ತೊಬ್ಬ ಚೂರಿ ತೋರಿಸಿ ಪರ್ಸ್ ಹಾಗೂ ಬ್ಯಾಗ್‍ ಪರಿಶೀಲಿಸಿದ್ದ. ಪರ್ಸ್‍ನಲ್ಲಿ ಹಣ ಇಲ್ಲದಿದ್ದ ಕಾರಣ ಸಂದೇಶ್ ಅವರ ಎಟಿಎಂ ಕಾರ್ಡ್ ಕಸಿದುಕೊಂಡು, ಅದರ ಪಾಸ್‍ವರ್ಡ್ ಪಡೆದು ಎಟಿಎಂ ಕೇಂದ್ರದ ಬಳಿ ಹೋಗಿ ₹ 8 ಸಾವಿರ ಡ್ರಾ ಮಾಡಿಕೊಂಡಿದ್ದಾರೆ.

ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಸಿ, ವಿಜಯನಗರದ ಬಳಿ ರಸ್ತೆ ಮಧ್ಯೆ ಸಂದೇಶ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT