ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಆರ್‌ಎಂಸಿಎಚ್: ಉಳಿದ ಸೀಟುಗಳ ಕೌನ್ಸೆಲಿಂಗ್‌ಗೆ ಅನುಮತಿ

Last Updated 4 ಡಿಸೆಂಬರ್ 2020, 7:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಆರ್‌ಆರ್‌ಎಂಸಿಎಚ್) ಪ್ರಸಕ್ತ ಸಾಲಿನ ಬಾಕಿ 118 ಸ್ಥಾನಗಳಿಗೆ ವಿದ್ಯಾರ್ಥಿಗಳ ಕೌನ್ಸೆಲಿಂಗ್ ನಡೆಸಲು ಆರೋಗ್ಯ ವಿಜ್ಞಾನ ಮಹಾನಿರ್ದೇಶಕರಿಗೆ (ಡಿಜಿಎಚ್‌ಎಸ್) ಅವಕಾಶ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ತಮಿಳು ಭಾಷಾ ಅಲ್ಪಸಂಖ್ಯಾತ ಸಂಸ್ಥೆಯಾದ ಆರ್‌ಆರ್‌ಎಂಸಿಎಚ್‌ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಮತ್ತು ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ಸಂಸ್ಥೆಯನ್ನು ಚೆನ್ನೈಯ ಡಾ. ಎಂಜಿಆರ್‌ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯ ವ್ಯಾಪ್ತಿಗೆ ಒಳಪಡಿಸಿ ಕೇಂದ್ರ ಸರ್ಕಾರ 2019ರ ಫೆಬ್ರುವರಿಯಲ್ಲಿ ಹೊರಡಿಸಿದ್ದ ಆದೇಶವನ್ನು ಏಕಸದಸ್ಯ ಪೀಠ 2020ರ ನವೆಂಬರ್ 3ರಂದು ರದ್ದುಗೊಳಿಸಿತ್ತು. ಕರ್ನಾಟಕ ಸರ್ಕಾರದ ಆಕ್ಷೇಪ ಪರಿಗಣಿಸದೆ ವರ್ಗಾವಣೆ ಶಿಫಾರಸನ್ನು ಯುಜಿಸಿ ಮಾಡಲಾಗದು ಎಂದು ಏಕ ಸದಸ್ಯ ಪೀಠ ಹೇಳಿತ್ತು. ವೈದ್ಯಕೀಯ ಕಾಲೇಜನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ವ್ಯಾಪ್ತಿಯಲ್ಲೇ ಉಳಿಸಲು ನಿರ್ದೇಶನ ನೀಡಿತ್ತು.

‘ಡಿಜಿಎಚ್‌ಎಸ್‌ ಈಗಾಗಲೇ 132 ಸ್ಥಾನಗಳ ಕೌನ್ಸೆಲಿಂಗ್ ನಡೆಸಿದೆ. 2020–21ನೇ ಸಾಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಳಿದ ಸ್ಥಾನಗಳಿಗೂ ಕೌನ್ಸೆಲಿಂಗ್ ನಡೆಸುವುದು ಸೂಕ್ತ’ ಎಂದು ವಿಭಾಗೀಯ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT