ಶುಕ್ರವಾರ, ಮೇ 20, 2022
23 °C

₹ 2.57 ಲಕ್ಷ ಮರಳಿಸಿದ ಆಟೊ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಟೊದಲ್ಲಿ ‍ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ₹ 2.57 ಲಕ್ಷ ಹಣವನ್ನು ಚಾಲಕ ಡಿ. ಮೋಹನ್ ಎಂಬುವರು ಪೊಲೀಸರ ಮೂಲಕ ವಾಪಸ್‌ ನೀಡಿದ್ದು, ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಸನ್ಮಾನಿಸಿದ್ದಾರೆ.

‘ಆನಂದಪುರದ ನಿವಾಸಿ ಮೋಹನ್, ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಸಿರ್ಸಿ ವೃತ್ತದಲ್ಲಿ ಇಳಿಸಿದ್ದರು. ಅದೇ ವೇಳೆಯೇ ಪ್ರಯಾಣಿಕ, ಹಣವಿದ್ದ ಬ್ಯಾಗ್‌ನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ನೋಡಿದ್ದ ಚಾಲಕ ಮೋಹನ್, ಪ್ರಯಾಣಿಕನಿಗಾಗಿ ಹುಡುಕಾಡಿದ್ದರು’ ಎಂದು ಸಂಜೀವ್ ಪಾಟೀಲ ಹೇಳಿದರು.

‘ಬ್ಯಾಗ್ ಸಮೇತ ಚಾಮರಾಜಪೇಟೆ ಠಾಣೆಗೆ ಬಂದಿದ್ದ ಮೋಹನ್, ಪೊಲೀಸರ ಬಳಿ ಘಟನೆ ಬಗ್ಗೆ ವಿವರಿಸಿದ್ದರು. ಬ್ಯಾಗ್ ವಾಪಸ್ ನೀಡಿ ಮಾನವೀಯತೆ ಮೆರೆದ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ಕೆಲಸ ಇತರೆ ಚಾಲಕರಿಗೂ ಆದರ್ಶವಾಗಬೇಕು’ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು