ಬೆಂಗಳೂರು: ಸಾಲುಮರಗಳನ್ನು ನೆಟ್ಟು, ನೀರುಣಿಸಿ ಪೋಷಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಬೆಳಿಗ್ಗೆ ಇಡಲಾಗಿತ್ತು.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಪರಿಸರ ಪ್ರೇಮಿಗಳು, ತಿಮ್ಮಕ್ಕ ಅವರ ಅಭಿಮಾನಿಗಳು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ಸಾಕುಮಗ ಉಮೇಶ್ ಬಳ್ಳೂರು ಅವರಿಗೆ ಸಾಂತ್ವನ ಹೇಳಿದರು. ತಿಮ್ಮಕ್ಕ ಅವರ ತಂಗಿ ಲಕ್ಷ್ಮಮ್ಮ, ತಮ್ಮ ಕೆಂಪಯ್ಯ ಸಹಿತ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಬಳಿಕ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಜಿ. ಪರಮೇಶ್ವರ ಮಾತನಾಡಿ, ‘ತಿಮ್ಮಕ್ಕ ನನಗೆ ಮತ್ತು ನನ್ನ ಕುಟುಂಬಕ್ಕೆ ಹತ್ತಿರವಾಗಿದ್ದರು. ಯಾರೂ ನಡೆಯದ ದಾರಿಯನ್ನು ಅವರು ಸೃಷ್ಟಿ ಮಾಡಿಕೊಂಡು ಪರಿಸರ ಸಂರಕ್ಷಣೆಯ ಮಾತನ್ನು ಕೃತಿಯಲ್ಲಿ ತೋರಿಸಿದವರು’ ಎಂದು ನೆನಪು ಮಾಡಿಕೊಂಡರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ‘ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆ ದೇಶಕ್ಕೆ ಮಾದರಿಯಾದುದು. ಅದಕ್ಕಾಗಿಯೇ ದೇಶದ ನೂರು ಮಹಿಳೆಯರಲ್ಲಿ ಒಬ್ಬರು ಎಂದು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿಯವರು ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ಇಂಥ ಸಾಧಕರು ಮತ್ತೆ ಹುಟ್ಟಿಬರಬೇಕು’ ಎಂದು ಆಶಿಸಿದರು.

‘ಸಾಲುಮರದ ತಿಮ್ಮಕ್ಕ’ ನಾಟಕದ ಹಾಡುಗಳನ್ನು ಕಲಾವಿದರು ಹಾಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ, ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಿಂದ ಮಲ್ಲತ್ತಹಳ್ಳಿ ಕಲಾಗ್ರಾಮಕ್ಕೆ ಒಯ್ಯಲಾಯಿತು. ಅಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

114 ಸ್ಥಳಗಳಲ್ಲಿ ವೃಕ್ಷ: ಖಂಡ್ರೆ

‘114 ವರ್ಷ ಜೀವಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ 114 ಸ್ಥಳಗಳಲ್ಲಿ ಗಿಡ ನೆಟ್ಟು ಪೋಷಿಸಿ ವೃಕ್ಷಗಳನ್ನಾಗಿ ಮಾಡಲಾಗುವುದು. ತಿಮ್ಮಕ್ಕ ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ ಎಂದರು. ಇಲಾಖೆ ಅವರನ್ನು ಪರಿಸರ ರಾಯಭಾರಿಯಾಗಿ ಪುರಸ್ಕರಿಸಿತ್ತು. ಅಜ್ಜಿಯ ಪ್ರೇರಣೆಯಿಂದ ನೂರಾರು ಜನರು ತಮ್ಮ ಕೈಲಾದಷ್ಟು ಸಸಿ ನೆಟ್ಟು ಪೋಷಿಸುತ್ತಿದ್ದಾರೆ. ಲಕ್ಷಾಂತರ ಪರಿಸರ ಪ್ರೇಮಿಗಳಿಗೆ ತಿಮ್ಮಕ್ಕ ಪ್ರೇರಣೆಯಾಗಿದ್ದರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.