ಬುಧವಾರ, ಆಗಸ್ಟ್ 21, 2019
22 °C
‘ಬಡ್ತಿ ಮೀಸಲಾತಿ ಬೇಡ’ ಎಂದಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ

‘ಬಡ್ತಿ ಮೀಸಲಾತಿ: ಸ್ವಾಮೀಜಿ ಹೇಳಿಕೆ ಹಿಂಪಡೆಯಲಿ’

Published:
Updated:

ಬೆಂಗಳೂರು: ‘ಬಡ್ತಿ ಮೀಸಲಾತಿ ಬೇಡ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿರುವುದು ದಲಿತ ಸಮುದಾಯಕ್ಕೆ ದಿಗ್ಭ್ರಮೆ ಮೂಡಿಸಿದೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. 

‘ಶತಮಾನಗಳಿಂದ ವಂಚಿತರಾಗಿದ್ದ ಕೆಳ ಸಮುದಾಯಗಳಿಗೆ ಅನುಭವ ಮಂಟಪದಲ್ಲಿ ಬಸವಣ್ಣ ಅವಕಾಶ ಮಾಡಿಕೊಟ್ಟಿದ್ದರು. ಇಂತಹ ಅನುಭವ ಮಂಟಪದ ಮಾದರಿಯನ್ನೇ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದಲ್ಲಿ ಅಳವಡಿಸಿದ್ದರು’ ಎಂದು ಸಮಿತಿ ಹೇಳಿದೆ. 

ಇದನ್ನೂ ಓದಿ: ಬಡ್ತಿ ಮೀಸಲಾತಿ ಬೇಡ ಸಾಣೇಹಳ್ಳಿ ಶ್ರೀ

‘ಜಾತಿಯ ಅಸಮಾನತೆ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ಮೀಸಲಾತಿ, ಬಡ್ತಿ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯದ ಬದ್ಧತೆ. ಬಡ್ತಿ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ದಲಿತರ ಪರ ತೀರ್ಪು ನೀಡಿದೆ. ಬಡ್ತಿ ಮೀಸಲಾತಿ ಏಕೆ ನೀಡುತ್ತಿದ್ದಾರೆ ಎಂಬ ಬಗ್ಗೆ ಸ್ವಾಮೀಜಿಯವರಿಗೆ ಅರಿವಿನ ಕೊರತೆ ಇದೆ’ ಎಂದು ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)